ಜನವರಿ ಅಂತ್ಯದ ವೇಳೆಗೆ ಬೆಂಗಳೂರು(Bengaluru) ನಗರದಲ್ಲಿ ಕ್ಯಾಡ್ರಿ ಸೈಕಲ್ ಮೀಟರ್ ಟ್ಯಾಕ್ಸಿಗಳು (Bajaj Qute) ಅಧಿಕೃತವಾಗಿ ರಸ್ತೆಗಿಳಿಯಲಿವೆ. ಮೊಬೈಲ್ ಆಯಪ್(Mobile App) ಆಧಾರಿತರ ಓಲಾ(Ola) ಮತ್ತು ಉಬರ್‌ಗಳ(Uber) ವಿಧಿಸುತ್ತಿರುವ ಕಮಿಷನ್‌ನಿಂದ ಬೇಸತ್ತಿರುವ ಬೆಂಗಳೂರು ನಗರದ ಕ್ಯಾಬ್ ಚಾಲಕರು ಇದೀಗ ಮೀಟರ್ ಕ್ಯಾಬ್‌ಗಳತ್ತ (ಕ್ಯಾಡ್ರಿ ಸೈಕಲ್) ಮುಖ ಮಾಡಿದ್ದು, ಪ್ರಯಾಣ ದರ ನಿಗದಿ ಮಾಡುವಂತೆ ಸಾರಿಗೆ ಇಲಾಖೆಗೆ(Department of Transport) ಮನವಿ ಮಾಡಿದ್ದಾರೆ.ಮಹಾನಗರಗಳಲ್ಲಿ ಸಂಚಾರಕ್ಕಾಗಿ ಬಜಾಜ್ ಆಟೋ(Bajaj Auto) ಕಂಪನಿಯಿಂದ ಆವಿಷ್ಕಾರಗೊಂಡಿರುವ ಸುಮಾರು 600ಕ್ಕೂ ಹೆಚ್ಚು ಕ್ಯಾಡ್ರಿ ಸೈಕಲ್‌ಗಳು ಈಗಾಗಲೇ ನಗರದಲ್ಲಿ ಸಂಚರಿಸುತ್ತಿವೆ. ಆದರೆ, ಸಾರಿಗೆ ಇಲಾಖೆಯಿಂದ ಈ ವಾಹನಗಳಿಗೆ ಪ್ರಯಾಣ ದರವನ್ನು ಈವರೆಗೂ ನಿಗದಿ ಪಡಿಸಿಲ್ಲ. ಪರಿಣಾಮ ಈ ವಾಹನಗಳು ಅಧಿಕೃತವಾಗಿ ಸಂಚಾರ ಪ್ರಾರಂಭಿಸಿಲ್ಲ. ಆದರೆ, ಕೆಲ ವಾಹನಗಳ ಮಾಲೀಕರು ಅನಿವಾರ್ಯವಾಗಿ ಓಲಾ ಮತ್ತು ಉಬರ್ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಂಚಾರ ನಡೆಸಿದ್ದಾರೆ.