Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಯ್ಯೊ..ಏನ್ ಕಾಲ ಬಂತು ಒಂದು ಕಪ್ ಟೀಗೆ ಒಂದು ಸಿಗರೇಟ್ ಪ್ರೀ...

ಅಯ್ಯೊ..ಏನ್ ಕಾಲ ಬಂತು ಒಂದು ಕಪ್ ಟೀಗೆ ಒಂದು ಸಿಗರೇಟ್ ಪ್ರೀ...
ಬೆಂಗಳೂರು , ಶನಿವಾರ, 22 ಜುಲೈ 2017 (12:10 IST)
ಬೆಂಗಳೂರು:ಎಂಥಾ ಅಪಾಯಕಾರಿ ಬೆಳವಣಿಗೆ.. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಗರೇಟ್ ಕಂಪನಿಗಳು ತಮ್ಮ ಮಾರುಕಟ್ಟೆ ವಿಸ್ತರಣೆಗಾಗಿ ಅಪಾಯಕಾರಿ ಪ್ರಚಾರಗಳಲ್ಲಿ ತೊಡಗಿಕೊಂಡಿದ್ದಾರೆ. ಜನರನ್ನು ಅಕರ್ಷಿಸುವ ಸಲುವಾಗಿ ಟೀ ಸ್ಟಾಲ್ ಗಳಲ್ಲಿ ಟೀ ತೆಗೆದುಕೊಂಡರೆ ಸಿಗರೇಟ್ ನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
 
ಈ ಬೆಳವಣಿಗೆಯಿಂದಾಗಿ ಯುವಕರು, ಬಾಲಕರು ಮಾತ್ರವಲ್ಲ, ಸಿಗರೇಟ್ ಅಭ್ಯಾಸವಿಲ್ಲದವರೂ ಸಿಗರೇಟ್ ಚಟಕ್ಕೆ ತುತ್ತಾಗಲು ಕಾರಣವಾಗಿದೆ. ಬೆಂಗಲೂರು ದಕ್ಷಿಣ ಡಿಸಿಪಿ ವಿಭಾಗ ಮತ್ತು ಪಶ್ಚಿಮ ವಿಭಾಗದ ಶಾಲಾ ಕಾಲೇಜುಗಳ ಆವರಣದಲ್ಲಿ ಈ ರೀತಿ ಅನಾರೋಗ್ಯಕರ ಸಿಗರೇಟ್ ಜಾಹೀರಾತು ಮಾರಾಟ ಜಾಲ ಕಂಡು ಬಂದಿದ್ದು, ಪೊಲೀಸರು ಪ್ರಕರಣಗಳನ್ನು ಕೂಡ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ.
 
ಫಿಲಿಪ್ ಮೋರಿಸ್ ಕಂಪನಿಯ ಮೆಲ್ಬೋರೋ ಬ್ರ್ಯಾಂಡ್ ನ ಸಿಗರೇಟ್ ಮಾರಾಟಗಾರರು, ಏಜೆನ್ಸಿಗಳು ಈ ರೀತಿ ಅಪಾಯಕಾರಿ ಪೈಪೋಟಿಗಳಿಗೆ ಇಳಿದಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಇನ್ನು ಈ ಕಂಪನಿ ತಮ್ಮ ಬ್ರ್ಯಾಂಡ್ ಪ್ರಮೋಷನ್ ಗೆ ಆಕರ್ಷಕ ಉಡುಗರೆಯನ್ನೂ ನೀಡಿ, ಬೈಕ್-ಕಾರ್ ಗಳನ್ನು ಕೊಡುಗೆ ನೀಡಿ ಯುವಕ-ಯುವತಿಯರನ್ನು ಆಕರ್ಷಿಸಲು ಶಾಲಾ-ಕಾಲೇಜು ಆವರಣಗಳಲ್ಲಿ ತಮ್ಮ ಬ್ರ್ಯಾಂಡ್ ನ್ ಸಿಗರೇಟ್ ಹಿಡಿದು ಓಡಾಡುವಂತೆ, ಉಚಿತ ಸಿಗರೆಟ್ ಕೂಡ ವಿತರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ರುಂಡ ಕತ್ತರಿಸಿಕೊಳ್ಳುತ್ತಾರಂತೆ ಜಮೀರ್ ಅಹಮ್ಮದ್!