ಬೆಂಗಳೂರು: ಕೊರೋನಾ ಪ್ರಕರಣಗಳು ಕಡಿಮೆಯಾಗಿದ್ದು, ಅನ್ ಲಾಕ್ ಗೆ ಸಿದ್ಧವಾಗಿರುವ ರಾಜ್ಯ ರಾಜಧಾನಿ ಬೆಂಗಳೂರಿಗೆ ಈಗ ವಲಸಿಗರದ್ದೇ ಭೀತಿ ಶುರುವಾಗಿದೆ.
ಅನ್ ಲಾಕ್ ಆದ ತಕ್ಷಣ ಊರಿಗೆ ಮರಳಿರುವ ವಲಸಿಗರು ಬೆಂಗಳೂರಿಗೆ ವಾಪಸಾಗುತ್ತಾರೆ. ಇತ್ತೀಚೆಗೆ ಹಳ್ಳಿಗಳಲ್ಲಿ ಕೊರೋನಾ ಪ್ರಕರಣಗಳು ವ್ಯಾಪಕವಾಗಿವೆ. ಈ ಹಿನ್ನಲೆಯಲ್ಲಿ ಈ ವಲಸಿಗರು ಬೆಂಗಳೂರಿಗೆ ವಾಪಸಾದಾಗ ಸೋಂಕಿನ ಪ್ರಮಾಣ ಏರಿಕೆಯಾಗುವ ಭೀತಿಯಲ್ಲಿ ನಗರವಿದೆ.
ಇದೀಗ ಬೆಂಗಳೂರಿನ ಪಾಸಿಟಿವಿ ದರ ಶೇ.5 ರ ಸಮೀಪ ಬಂದಿದೆ. ಮೂರು ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ಕಂಡುಬರುತ್ತಿವೆ. ಆದರೆ ಅನ್ ಲಾಕ್ ಆದರೆ ಈ ಸಂಖ್ಯೆಯಲ್ಲಿ ಇದ್ದಕ್ಕಿದ್ದಂತೆ ಏರಿಕೆಯಾಗುವ ಸಾಧ‍್ಯತೆಯಿದೆ. ಹೀಗಾಗಿ ಹಂತ ಹಂತವಾಗಿ ಅನ್ ಲಾಕ್ ಮಾಡುವುದೇ ಜಾಣತನ.