ಕೆಆರ್ ಎಸ್ ನಿಂದ ತಮಿಳುನಾಡಿಗೆ ನೀರು ಹರಿಸ್ತಾ ಇರೋದು ಕೇವಲ ರೈತರಿಗೆ ಮಾತ್ರ ಆತಂಕ ಹುಟ್ಟಿಸಿಲ್ಲ, ಸಿಲಿಕಾನ್ ಸಿಟಿ ಮುಂದಿಗೂ ಕೂಡ ಭಯ ಹುಟ್ಟಿಸಿದೆ. ಸಿಟಿಗೆ ಜೀವ ನಾಡಿಯಾಗಿದ್ದ ಕಾವೇರಿ ಬರಿದಾಗುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಾಗ ಬಹುದು ಎಂಬ ಚಿಂತೆ ಸಿಲಿಕಾನ್ ಸಿಟಿ ಮಂದಿಗೆ ಕಾಡುತ್ತಿದೆ.ಮುಂಗಾರು ಕಣ್ಮರೆಯಾಗಿ ಜಲ ಸ್ಥಿತಿ ಕೇಳುತ್ತೀರದಂತಾಗಿದೆ ಹೋಗಿದೆ ಉಕ್ಕಿ ಹರಿಯುತ್ತಿದ್ದ ಹಳ್ಳ ಕೊಳ ನದಿಗಳು ಸೊರಗಿ ಹೋಗಿವೆ. ಹೀಗಿರುವಾಗ ಸಿಲಿಕಾನ್ ಸಿಟಿ ಜೀವ ನಾಡಿಯಾಗಿರುವ ಕೆ ಆರ್ ಎಸ್ ನಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತದೆ. ಇದರಿಂದಾಗಿ ಬೆಂಗಳೂರು ಸೇರಿ 110 ಹಳ್ಳಿಗಳಿಗೆ ನೀರಿ ಹಾಹಾಕರಾದ ಭೀತಿ ಕಾಡುತ್ತಿದೆ
ಬೆಂಗಳೂರು ನಗರಕ್ಕೆ ವರ್ಷಕ್ಕೆ ಏನಿಲ್ಲ ಅಂದ್ರು 19 ಟಿಎಂಸಿ ನೀರು ಬೇಕಾಗುತ್ತೆ,ತಿಂಗಳಿಗೆ 1.5 ಟಿಎಂಸಿ, ಹಾಗೂ ದಿನಕ್ಕೆ 1,500 MLD ನೀರು ಬೇಕು, ಇನ್ನು ನಗರದಲ್ಲಿ BWSSB 6 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಕಾವೇರಿ ನೀರು ಸರಬರಾಜು ಯೋಜನೆ ಮೂಲಕ ನೀರು ನೀರುಪೂರೈಸುತ್ತಿದೆ. ಇಷ್ಟೇಅಲ್ಲದೆ 110 ಹಳ್ಳಿಗಳಲ್ಲಿ ನೀರಿನ ಕೊರತೆ ನಿಗಿಸಲು ಹೊಸದಾಗಿ ಬೋರ್ವೆಲ್ ಗಳನ್ನ ಕೋರಿಸಲಾಗುತ್ತದೆ. ಪ್ರಮುಖವಾಗಿ ದಾಸರಹಳ್ಳಿ ಯಲಹಂಕ ವ್ಯಾಪ್ತಿಯ ಹಳ್ಳಿಗಳಲ್ಲಿ ಬೋರ್ವೆಲ್ ಹಾಕ್ಸಲ್ ಆಗ್ತಾ ಇದೆ. ಹೀಗಿರುವಾಗ ಅತ್ತ KRS ನಲ್ಲಿ ದಿನ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಬೆಂಗಳೂರುಗರಿಗೆ ನೀರಿನ ಅಭವದ ಭೀತಿ ಶುರುವಾಗಿದೆ. ಟ್ಯಾಂಕರ್ ಇಂದ ನೀರು ಪೂರೈಕೆ ಮಾಡುವ ಅಭಾವ ಸ್ಥಿತಿ ಎದುರಾಗಿದೆ. ಬೆಂಗಳೂರಿಗೆ ಜೀವಜಲವಾಗಿ ನೀರು ಪೂರೈಸುತ್ತಿರುವ KRS ನಲ್ಲಿ ನೀರಿನ ಪ್ರಮಾಣ ಕಡಿಮೆ ಯಾಗಿರೋದು ನಗರ ವಾಸಿಗಳಲ್ಲಿ ಆತಂಕ ಶುರುವಾಗಿದೆ.
ಬೇಸಿಗೆ ಬರುವ ಮುನ್ನವೇ ಸಿಲಿಕಾನ್ ಸಿಟಿ ಮಂದಿಗೆ ನೀರಿನ ಅಭಾವದ ಆತಂಕಶುರು ಆಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ನೀರಿನ ಅಭಾವ ಎದುರಾಗುವ ಮನವೇ ಸರ್ಕಾರ ಎತ್ತಿಕೊಂಡು ಸೂಕ್ತ ಪರಿಹಾರ ಕಂಡುಕೊಳ್ಳಬೇಕು.