Webdunia - Bharat's app for daily news and videos

Install App

12ನೇ ತರಗತಿ ಪಾಸಾದವರಿಗೆ ಜೈನ್, ಎನ್‌ಟಿಟಿಎಫ್‌ನಿಂದ ಸುವರ್ಣಾವಕಾಶ

Webdunia
ಶನಿವಾರ, 27 ಜೂನ್ 2020 (15:47 IST)
ಬೆಂಗಳೂರು: ಜೈನ್ (ವಿಶ್ವವಿದ್ಯಾಲಯವೆಂದು ಪರಿಗಣಿಸಲಾಗಿದೆ) ಹಾಗೂ ನೆಟ್ಟೂರ್ ತಾಂತ್ರಿಕ ಶಿಕ್ಷಣ ಅಡಿಪಾಯ (ಎನ್.ಟಿ.ಟಿ.ಎಫ್.) ಸೇರಿ ಒಂದು ನವೀನ ಪಾಲುದಾರಿಕೆಯಿಂದ ವಿದ್ಯಾರ್ಥಿಗಳು/ವಿದ್ಯಾರ್ಥಿನಿಗಳಿಗೆ ಕೌಶಲ್ಯ ಆಧಾರಿತ ವೃತ್ತಿಪರ ಡಿಪ್ಲೊಮಾವನ್ನು “ಬ್ಯಾಚುಲರ್ ಆಫ್ ವೊಕೇಶನಲ್ ಎಜುಕೇಷನ್(ಬಿ.ವಿ.ಒ.ಸಿ.)” ಎಂಬ ಹೆಸರಿನಿಂದ ಪಠ್ಯಕ್ರಮವನ್ನು ನೀಡಲಿವೆ.  
ಸದರಿ ಸಂಸ್ಥೆಗಳ ಸಹಯೋಗದಿಂದ 12ನೇ ಗ್ರೇಡ್ ಉತ್ತೀರ್ಣರಾದ ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರಿಗೆ ಒಂದೇ ಬಾರಿ ಜೈನ್ ವಿಶ್ವವಿದ್ಯಾಲಯ ಕಲಿಸುವ ವೃತ್ತಿ ವಿದ್ಯೆಯನ್ನು ಎನ್.ಟಿ.ಟಿ.ಎಫ್.ರಲ್ಲಿ 3 ವರ್ಷದ ಡಿಪ್ಲೊಮಾದಲ್ಲಿ ದಾಖಲಾತಿ ಮಾಡಿಸಿಕೊಳ್ಳುವದಿಂದ ಅದರ ಜೊತೆಯಲ್ಲೇ ಪೂರೈಸಬಹುದು. ಸದರಿ ಪದವಿಯನ್ನು ಪೂರ್ತಿ ಮಾಡಿದ ವಿದ್ಯಾರ್ಥಿಗಳಿಗೆ ಜೈನ್ ವಿಶ್ವವಿದ್ಯಾಲಯವು ಪದರಿ ಪ್ರಮಾಣಪತ್ರಗಳನ್ನು ಸಹ ಪ್ರದಾನ ಮಾಡುತ್ತದೆ. 
 
ಈ ತಿಳುವಳಿಕೆಯ ಸ್ಮರಣಿಕೆ(ಎಮ್.ಒ.ಯು) ಜೈನ್ ವಿಶ್ವವಿದ್ಯಾಲಯವು ವಿದ್ಯೆಯನ್ನು ಎಲ್ಲರಿಗೂ ಪ್ರವೇಶವಿರುವಂತೆ ಮಾಡುವ ಒಂದು ತಂತ್ರದಲ್ಲಿ ಒಂದು ಗಮನಾರ್ಹ ಹಂತವಾಗಿದೆ ಮತ್ತು ಗುಣಮಟ್ಟ ಇರುವ ಕಾರ್ಯಪಡೆಯ ಬಗ್ಗೆ ಹೆಚ್ಚಾಗಿತ್ತಿರುವ ಬೇಡಿಕೆಯನ್ನು ಪೂರೈಸಲು ಮತ್ತು ಹೊಸ ಹೊಸ ಅವಕಾಶಗಳನ್ನು ಅನ್ವೇಷಿಸಲು  ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ. ಜೈನ್ ವಿಶ್ವವಿದ್ಯಾಲಯವು ಎನ್.ಟಿ.ಟಿ.ಎಫ್.ರ ಸಹಕಾರದಂತೆ ವಿದ್ಯಾರ್ಥಿಗಳ ಕೌಶಲ್ಯವನ್ನು ನವೀಕರಿಸಲು ಮತ್ತು ಅವರ ಆಯ್ಕೆಗಳು ಮತ್ತು ಆಸಕ್ತಿಗಳನುಸಾರವಾಗಿ ವೈವಿಧ್ಯವಾದಂತಹ ವೃತ್ತಿಪರ ಶಿಕ್ಷಣಗಳನ್ನು ಹೊರತರಲಾಗಿದೆ.
 
ಈ ಸಹಯೋಗಕ್ಕೆ ಸಂಬಂಧಿಸಿದಂತೆ ಜೈನ್ (ವಿಶ್ವವಿದ್ಯಾಲಯವೆಂದು ಪರಿಗಣಿಸಲಾಗಿದೆ)ದ ಮಾನ್ಯ ಕುಲಪತಿಯಾದ ಡಾ: ಚೆನ್‌ರಾಜ್ ರಾಯ್ ಚಂದ್‍ರವರು ಮಾತನಾಡಿ “ಕೌಶಲ್ಯ ಇರುವ ಕಾರ್ಯಕ್ರಮಗಳಲ್ಲಿ ಪ್ರವೇಶ ನೀಡಿ ಮತ್ತು ಯುವ ಜನರನ್ನು ಕೌಶಲ್ಯರಾಗಿ ಮಾಡುವುದರಿಂದ ನಮ್ಮ ಆರ್ಥಿಕತೆಯು ಅಭಿವೃದ್ಧಿ ಹೊಂದುತ್ತದೆ ಎಂದು ಮತ್ತು ಮೇಲ್ಕಂಡ ಸಹಯೋಗವು ಅರ್ಥವಂತ ಸೂಚನೆಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆಂದು ಪೂರ್ತಿ ನಂಬಿಕೆ ಇದೆ ಎಂದು” ತಿಳಿಸಿದರು.
 
ಎನ್.ಟಿ.ಟಿ.ಎಫ್. ವ್ಯವಸ್ಥಾಪಕ ನಿರ್ದೇಶಕರಾದ ಮಾನ್ಯ ಡಾ:ಎನ್.ರೆಗುರಾಜ್‍ರವರು ಮಾತನಾಡಿ “ವಿದ್ಯಾರ್ಥಿಗಳು ತಮ್ಮ ತಮ್ಮ ಗುರಿಗಳನ್ನು ಮುಟ್ಟಲು  ಮತ್ತು ನಾಳೆ ದಿನಗಳಲ್ಲಿ ಅವರ ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಸಹಾಯಪಡೆಯುವ ವಿಚಾರದಲ್ಲಿ ಈ ಸಹಯೋಗವು ಒಂದು ಗಮನಾರ್ಹವಾದ ನಡೆಯಾಗಿದೆ. ಮತ್ತು ನಾವುಗಳು ಹೂಡಿಕೆ ಮಾಡುವ ಮತ್ತು ಶಿಕ್ಷಣ, ಕೆಲಸಗಳು ನೀಡುವ ಮತ್ತು ಹೊಸ ಹೊಸ ಉದ್ಯಮಶೀಲತೆಗಳನ್ನು ಸ್ಥಾಪನೆಮಾಡುವ ವಿಚಾರಗಳಲ್ಲಿ ಜೊತೆಯಲ್ಲಿ ನಡೆಯುತ್ತಾ ಯುವಜನರು ಅವರವರ ಸಂಭಾವ್ಯಗಳನ್ನು ಸೇರಲು ನಾವು ಪ್ರೋತ್ಸಾಹಿಸಬೇಕೆಂದು” ತಿಳಿಸಿದರು.
 
ಜೈನ್ (ವಿಶ್ವವಿದ್ಯಾಲಯವೆಂದು ಪರಿಗಣಿಸಲಾಗಿದೆ) ಬಗ್ಗೆ: 
 
ಜೈನ್ ವಿಶ್ವವಿದ್ಯಾಲಯವು ದೇಶದಲ್ಲಿ ಪ್ರಧಾನ ವಿಶ್ವವಿದ್ಯಾಲಯಗಳಲ್ಲಿ ಒಂದು ಸ್ಥಾನ ಪಡೆದ ವಿಶ್ವವಿದ್ಯಾಲಯವಾಗಿದ್ದು, ದೇಶ ವಿದೇಶಗಳಲ್ಲಿ 89ಕ್ಕೂ ಹೆಚ್ಚು ಇಂತಹ ಸಹಯೋಗಗಳುಳ್ಳ ಒಂದು ಸಂಸ್ಥೆಯಾಗಿದೆ. ಪ್ರತಿ ವರ್ಷವೂ ಸದರಿ ಜೈನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣೆ ಪಡೆದಿರುವ 5000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪ್ರಪಂಚದ ಉನ್ನತ ದರ್ಜೆಯ ಕಂಪನಿಗಳಲ್ಲಿ ಉನ್ನತ ದರ್ಜೆಯ ಸ್ಥಾನಗಳನ್ನು ಪಡೆಯುತ್ತಿದ್ದಾರೆ. 
 
ಪ್ರತಿಭೆಯನ್ನು ಅಭಿವೃದ್ಧಿಪಡೆಸುವ ವಿಚಾರದಲ್ಲಿ ಜೈನ್ ವಿಶ್ವವಿದ್ಯಾಲಯಕ್ಕೆ ಪ್ರಸಿದ್ಧ ಚರಿತ್ರೆ ಇದ್ದು, ಅನನ್ಯ ಸಂಯೋಜನೆಗಳು ಮತ್ತು ವಿವಿಧ ಉದ್ಯಮಗಳಿಗೆ ಸಂಬಂಧಿಸಿದ ಕೋರ್ಸ್‍ಗಳನ್ನು ತರುವ ವಿಷಯದಲ್ಲಿ ಜೈನ್ ವಿಶ್ವವಿದ್ಯಾಲಯಕ್ಕೆ ಖ್ಯಾತಿ ಇದೆ.

ಎನ್.ಟಿ.ಟಿ.ಎಫ್. ಬಗ್ಗೆ:
 
1959 ಸ್ಥಾಪಿಸಲಾಗಿ, ಯುವ ಜನರಿಗೆ ತಂತ್ರದ ವಿದ್ಯೆ ಮತ್ತು ಶಿಕ್ಷಣ ನೀಡುವ ವಿಷಯದಲ್ಲಿ ಎನ್.ಟಿ.ಟಿ.ಎಫ್. ಪ್ರಸಿದ್ಧವಾಗಿದೆ. ಮತ್ತು ಸದರಿ ಸಂಸ್ಥೆಯು ಸ್ವಿಸ್ ದೇಶದಿಂದ ತಂತ್ರಜ್ಞಾನವನ್ನು ಬದಲಾವಣೆ ಮಾಡಿಕೊಂಡು ತಂತ್ರ ಜ್ಞಾನದ ಒಂದು ಭಂಡಾರವಾಗಿದೆ. ಈಗ, ಎನ್.ಟಿ.ಟಿ.ಎಫ್. ಸಂಸ್ಥೆಗೆ ದೇಶದಲ್ಲಿ 60 ಕ್ಕೂ ಹೆಚ್ಚು ಶಿಕ್ಷಣೆ ಶಾಖೆಗಳಿದ್ದು, 20,000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳುಳ್ಳ ಒಂದು ಸಂಸ್ಥೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments