ಒಳ್ಳೆಯ ಮಗು ಬೇಕೆಂದರೆ ಸೆಕ್ಸ್ ಮಾಡಬೇಡಿ, ಮಾಂಸ ತಿನ್ನಬೇಡಿ, ಕೆಟ್ಟವರ ಸಹವಾಸ ಮಾಡಬೇಡಿ ಎಂದು ಕೇಂದ್ರದ ಆಯುಷ್ ಸಚಿವಾಲಯ ಬಿಡುಗಡೆಗೊಳಿಸಿರುವ ಬುಕ್ ಲೆಟ್`ನಲ್ಲಿ ಗರ್ಭಿಣಿಯರಿಗೆ ಸಲಹೆ ನೀಡಲಾಗಿದೆ.
ಗರ್ಭೀಣಿಯರಿಗಾಗಿ ಆಯೂಷ್ ಇಲಾಖೆಯ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಮದರ್ ಅಂಡ್ ಚೈಲ್ಡ್ ಕೇರ್ ಬುಕ್ ಲೆಟ್ ಬಿಡುಗಡೆ ಮಾಡಿದ್ದು, ಇದರಲ್ಲಿ ನಿಮಗೆ ಆರೋಗ್ಯವಂತ ಮಕ್ಕಳು ಬೇಕೆಂದರೆ ಮಹಿಳೆಯರು ಗರ್ಭ ಧರಿಸಿದ ಬಳಿಕ ಸೆಕ್ಸ್ ಮಾಡಬೇಡಿ, ಮಾಂಸಾಹಾರ ಸೇವಿಸಬೇಡಿ ಮತ್ತು ಕೆಟ್ಟ ಸಹವಾಸ ಮಾಡಬೇಡಿ,ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಕೊಳ್ಳಿ ಎಂದು ಹೇಳಿದೆ. ಅಷ್ಟೇ ಅಲ್ಲ, ಕೊಠಡಿಗಳಲ್ಲಿ ಒಳ್ಖೆಯ ಚಿತ್ರಗಳನ್ನ ಹಾಕಿಕೊಳ್ಳಿ ಎಂದು ಆಯುಷ್`ನ ಯೋಗ ಮತ್ತು ನ್ಯಾಚುರೋಪತಿ ಸಂಶೋಧನಾ ಮಂಡಳಿ ಶಿಫಾರಸು ಮಾಡಿದೆ.
ಆಯುಷ್`ನ ಈ ಶಿಫಾರಸ್ಸುಗಳು ಅವೈಜ್ಞಾನಿಕವಾದದ್ದಾಗಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್:
ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
http://kannada.fantasycricket.webdunia.com/