ಹೆಚ್.ವಿಶ್ವನಾಥ್ ಅವರು ಮಹಿಳೆಯೊಬ್ಬಳ ಜೊತೆ ಅಶ್ಲೀಲವಾಗಿ ಮಾತನಾಡುತ್ತಿರುವ ಆಡಿಯೋ ಇದಾಗಿದ್ದು, ಆದರೆ ವಿಶ್ವನಾಥ್ ಅವರೇ ಮಾತನಾಡಿದ್ದಾರೆ ಎಂಬ ಖಚಿತತೆ ಇಲ್ಲ.
ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್.ವಿಶ್ವನಾಥ್ ಅವರು, ಇಂತಹ ಸಂದರ್ಭದಲ್ಲಿ ಎಲ್ಲವನ್ನೂ ಹುಟ್ಟುಹಾಕುತ್ತಾರೆ, ಮಿಮಿಕ್ರಿಯಲ್ಲಿ ಏನು ಬೇಕಾದರೂ ಮಾಡಬಹುದು. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ. ಬೇಕಂತಲೇ ಮಾಡಿರುವ ಆಡಿಯೋ ಇದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.