ಜನರಿಗೆ ನ್ಯಾಯ ಕೊಡಿಸಬೇಕಾಗಿದ್ದ ವಕೀಲೆ ತನಗೇ ನ್ಯಾಯಸಿಕ್ಕಿಲ್ಲವೆಂದು ಸುಪ್ರೀಂಕೋರ್ಟ್ ಆವರಣದಲ್ಲಿ ವಿಷ ಸೇವಿಸಿದ ದಾರುಣ ಘಟನೆ ವರದಿಯಾಗಿದೆ. ತಮ್ಮ ಮೇಲೆ ಗ್ಯಾಂಗ್ ರೇಪ್ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ನ್ಯಾಯಸಿಕ್ಕಿಲ್ಲವೆಂದು ಹೇಳಿದ ವಕೀಲ ಸುಪ್ರೀಂಕೋರ್ಟ್ ಆವರಣದಲ್ಲಿ ಫೀನೈಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಮಹಿಳೆಯನ್ನು ಕೂಡಲೇ ರಾಮ್ ಮನೋಹರ ಲೋಹಿಯಾ ಆಸ್ಪತ್ರೆಗೆ ಸೇರಿಸಲಾಯಿತು.
2022ರ ನವೆಂಬರ್‌ನಲ್ಲಿ ತನ್ನ ಸಂಬಂಧಿಗಳು ತನ್ನ ಮೇಲೆ ಗ್ಯಾಂಗ್ ರೇಪ್ ಮಾಡಿದರು ಎಂದು ವಕೀಲೆ ಆರೋಪಿಸಿದ್ದಾರೆ. ವಕೀಲೆ ಆತ್ಮಹತ್ಯೆಗೆ ಪ್ರಯತ್ನಿಸಿದ ಕೂಡಲೇ ಸುಪ್ರೀಂಕೋರ್ಟ್ ವಿಚಾರಣೆ ಮುಂದೂಡಿತು.
ಮುಖ್ಯನ್ಯಾಯಮೂರ್ತಿ ಆರ್. ಎಂ. ಲೋಧಾ ದಿನದ ಕಲಾಪ ಮುಗಿಸಿ ಮನೆಗೆ ತೆರಳಲು ಸಿದ್ಧರಾಗುತ್ತಿದ್ದಂತೆ ಮಹಿಳೆಯ ವಿಷ ಸೇವನೆ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಹೈವೋಲ್ಟೇಡ್ ನಾಟಕವನ್ನು ಸೃಷ್ಟಿಸಿತು.
ತಾನು ತಮ್ಮ ಸಂಬಂಧಿಗಳ ವಿರುದ್ಧ ಎಫ್‌ಐಆರ್ ಸಲ್ಲಿಸಿದ್ದರೂ, ತನಿಖೆ ಅಥವಾ ಮುಂದಿನ ಕ್ರಮ ಕೈಗೊಂಡಿರಲಿಲ್ಲ ಎಂದು ಹೇಳಿದರು. ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸೇರಿಸಲಾಯಿತು. ಸಿಜೆಐ ಮಹಿಳೆಗೆ ನೆರವಾಗಲು ಮಹಿಳಾ ವಕೀಲೆಯೊಬ್ಬರನ್ನು ನೇಮಕ ಮಾಡಿದರು.