ಅಲ್ಪಸಂಖ್ಯಾತರಿಗೆ ಟಿಕೆಟ್ ಬೇಕಾದರೆ ಪಕ್ಷದ ಕಚೇರಿಯಲ್ಲಿ ಕಸಹೊಡೆಯಬೇಕು ಎನ್ನುವ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ಅಲ್ಪಸಂಖ್ಯಾತರ ಬಗ್ಗೆ ಈಶ್ವರಪ್ಪ ಆ ರೀತಿ ಹೇಳಬಾರದಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನೀಡಿದ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ಮೊದಲಿನಿಂದಲೂ ಅಲ್ಪಸಂಖ್ಯಾತರ ವಿರೋಧಿಗಳು. ಈಶ್ವರಪ್ಪ ಬಳಸಿದ ಪದವನ್ನು ಕಡತದಿಂದ ತೆಗೆಯಬೇಕು ಎಂದು ಸಿಎಂ ಸಿದ್ದರಾಮಯ್ಯ, ಸಭಾಪತಿ ಕೆ.ಬಿ.ಕೋಳಿವಾಡ್‌ರಲ್ಲಿ ಮನವಿ ಮಾಡಿದರು.
ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಈಶ್ವರಪ್ಪ, ಅಲ್ಪಸಂಖ್ಯಾತರಾದ ಕಲಾಂರನ್ನು ರಾಷ್ಟ್ರಪತಿ ಮಾಡಿದವರು ಯಾರು ಎಂದು ತಿರುಗೇಟು ನೀಡಿದರು. ಜಾರ್ಜ್ ಫರ್ನಾಂಡಿಸ್‌ರನ್ನು ಮಂತ್ರಿ ಮಾಡಿದವರು ಯಾರು ಎಂದು ತಿರುಗೇಟು ನೀಡಿದರು.
ಕಸಹೊಡೆಯುವುದು ಅಂದರೆ ಪಕ್ಷದ ಸಂಘಟನೆಯಲ್ಲಿರಬೇಕು, ಪಕ್ಷಕ್ಕಾಗಿ ಹಗಲಿರಳು ದುಡಿಯಬೇಕು, ಬ್ಯಾನರ್ ಕಟ್ಟಬೇಕು. ಅಂದಾಗ ಮಾತ್ರ ಪಕ್ಷದ ಟಿಕೆಟ್ ದೊರೆಯಲು ಸಾಧ್ಯ ಎಂದು ಕೆ.ಎಸ್.ಈಶ್ವರಪ್ಪ ವಿವರಣೆ ನೀಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.