ಗೋಕಾಕ ನಲ್ಲಿರೋ ಸರ್ವಾಧಿಕಾರ ಮನೋಭಾವನೆಯನ್ನು ಕೊನೆಗಾಣಿಸುವುದೇ ನನ್ನ ರಾಜಕೀಯ ನಡೆಯ ಗುರಿ. ಅದಕ್ಕೆ ನಾನು ಯಾವಾಗಲೂ ಬದ್ಧ. ಹೀಗಂತ ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.
ಸರ್ವಾಧಿಕಾರತ್ವದ ವಿರುದ್ಧ ನನ್ನ ಹೋರಾಟವಿದ್ದು, ಮುಂದೆಯೂ ಇರುತ್ತದೆ. ಪ್ರಸ್ತುತ ರಾಜಕೀಯದ ಬಗ್ಗೆ ಹಿಂಬಾಲಕರಿಗೆ ಮತ್ತು ಅಭಿಮಾನಿಗಳಿಗೆ ಯಾವುದೇ ಗೊಂದಲ ಬೇಕಿಲ್ಲ. ಅಕ್ಟೋಬರ್ 16 ರಿಂದ 30 ರವರೆಗೆ ಗೋಕಾಕ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಭಾಗಕ್ಕೆ ಭೇಟಿ ನೀಡುವೆ. ಮತದಾರರೊಂದಿಗೆ ಚರ್ಚಿಸಿ ಅವರ ಅನಿಸಿಕೆಗಳನ್ನು ಸಂಗ್ರಹಿಸುವೆ. ನವೆಂಬರ್ ಮೊದಲನೇ ವಾರದಲ್ಲಿ ಹಮ್ಮಿಕೊಳ್ಳೋ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯದ ಮೇಲೆ ನನ್ನ ರಾಜಕೀಯ ನಡೆ ಇರುತ್ತದೆ.
ಮತದಾರರ ಇಚ್ಛೆಯೇ ನನ್ನ ರಾಜಕೀಯ ನಡೆ ಅಂತ ಹೇಳಿದ್ದಾರೆ. ಈ ಮೂಲಕ ಅನರ್ಹ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಬಂಡಾಯ ಬಾವುಟ ಹಾರಿಸಿದ್ದು, ಬಿ.ಎಸ್.ಯಡಿಯೂರಪ್ಪಗೆ ಇದರಿಂದ ಇರುಸುಮುರುಸು ಆಗಲು ಕಾರಣವಾಗಲಿದೆ.