Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸದ್ಯಕ್ಕೆ ಎಪಿಎಲ್, ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಕೆಗೆ ಅನುಮತಿ ಇಲ್ಲ - ಕೆ ಎಚ್ ಮುನಿಯಪ್ಪ

ಸದ್ಯಕ್ಕೆ ಎಪಿಎಲ್, ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಕೆಗೆ ಅನುಮತಿ ಇಲ್ಲ - ಕೆ ಎಚ್ ಮುನಿಯಪ್ಪ
bangalore , ಶುಕ್ರವಾರ, 18 ಆಗಸ್ಟ್ 2023 (15:28 IST)
ಸದ್ಯಕ್ಕೆ ಎಪಿಎಲ್, ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಕೆಗೆ ಅನುಮತಿ ಇಲ್ಲಾ ಎಂದು ಸಚಿವ ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ. ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವುದು ಆರಂಭವಾಗಿಲ್ಲ ಎಂಬ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು ಹೌದು ಎಪಿಎಲ್ , ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆ ಗೆ ನಾವೇ ಓಪನ್ ಮಾಡಿಲ್ಲ.ಏನು ಕಾರಣ ಅಂತ ಸದ್ಯದಲ್ಲೇ ಹೇಳ್ತೇವೆ. ಇನ್ನೂ ಒಂದಿಷ್ಟು ದಿನ ಎಪಿಎಲ್, ಬಿಪಿಎಲ್ ಅರ್ಜಿ ಸಲ್ಲಿಕೆ ಗೆ ಅವಕಾಶ ಇಲ್ಲಾ ಎಂದು ಹೇಳಿದರು.
 
ಇಂದು ಜಿಲ್ಲಾ ಮಟ್ಟದ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದೇವೆ.ಡಿಬಿಟಿ ವಿಷಯದಲ್ಲಿ ಕಳೆದ ತಿಂಗಳು ತಡವಾಯಿತು‌.ಈ ತಿಂಗಳ 25,26 ಒಳಗೆ ಫಲಾನುಭವಿಗಳ ಅಕೌಂಟ್ ಗೆ ಹಣ ಸಂದಾಯವಾಗುತ್ತೆ.ಜೋಳ,ರಾಗಿ,ಅಕ್ಕಿ ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡ್ತಾರೆ ಅನ್ನೋದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ.2181 ಹುದ್ದೆ ತುಂಬಬೇಕಾಗಿದೆ.ಇದನ್ನ ಭರ್ತಿ ಮಾಡಲು ಮುಂದಾಗಿದ್ದೇವೆ.ಈಗಾಗಲೇ ಅಕ್ಕಿ ಕೊಡಲು ತೆಲಂಗಾಣ ಮತ್ತು ಆಂದ್ರಪ್ರದೇಶ ಮುಂದೆ ಬಂದಿದೆ. ಅಕ್ಕಿ ದರದ ಬಗ್ಗೆ ಮಾತುಕತೆ ನಡೆಯುತ್ತಿದೆ. ವಾರದ ಹತ್ತು ದಿನಗಳ ಒಳಗೆ ಎಲ್ಲವೂ ಫೈನಲ್ ಆಗುತ್ತೆ. ಮುಂದಿನ ತಿಂಗಳು ಪಡಿತರದಲ್ಲಿ ಹತ್ತು ಕೆಜಿ ಅಕ್ಕಿ ಸಿಗುತ್ತೆ ಅಂತ ಡೆಡ್ ಲೈನ್ ಕೊಡಕ್ಕೆ ಆಗಲ್ಲ. ಅಧಿಕಾರಿಗಳ ಜತೆ ಚರ್ಚೆ ಆಗ್ತಿದೆ.. ಮಾಹಿತಿ ಪಡೆದಿದ್ದೇನೆ ಎಂದು ಹೇಳಿದರು.
 
ಪರಿಷತ್ ನಾಮನಿರ್ದೇಶಿತ ಸ್ಥಾನಕ್ಕೆ ಸುಧಾಮ್ ದಾಸ್ ವಿರುದ್ಧ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿ 
ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿರುವುದು ನಿಜ.ಸುಧಾಮ್ ದಾಸ್ ಮೂರು ತಿಂಗಳ ಹಿಂದಿನ ತನಕ ಸರ್ಕಾರಿ ಅಧಿಕಾರಿ ಆಗಿದ್ರು.ಅವರು ಪಕ್ಷಕ್ಕೆ ಈಗಷ್ಟೇ ಬಂದಿದ್ದಾರೆ.ಇನ್ನೊಂದಿಷ್ಟು ದಿನಗಳ ಕಾಲ ಸುಧಾಮ್ ದಾಸ್ ಪಕ್ಷಕ್ಕೆ ಕೆಲಸ ಮಾಡಲಿ.೩೦ ವರ್ಷಗಳ ಕಾಲದಿಂದ ಕೆಲಸ ಮಾಡಿದ ದಲಿತ ನಾಯಕರಿಗೆ ಅವಕಾಶ ನೀಡಲಿ ಎಂಬುದಷ್ಟೇ ನಮ್ಮ ಸಲಹೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಪತ್ರ ಬರೆದಿರುವುದು ಸತ್ಯ.ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ.ಹೈಕಮಾಂಡ್ ನಾಯಕರ ನಿರ್ಧಾರ ಮುಖ್ಯ.ಡಿಕೆಶಿವಕುಮಾರ್ ರನ್ನು ವಿರೋಧಿಸಿ  ಬರೆದಿದ್ದೀರಾ ಎಂಬ ಪ್ರಶ್ನೆ ಅದಕ್ಕೆ ನಾನು ಈಗ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ತಿಂಗಳಿಗೆ ಅಕ್ಕಿ ಹೊಂದಿಸಲು ಪ್ರಯತ್ನ ನಡೆದಿದೆ : ಕೆ ಎಚ್ ಮುನಿಯಪ್ಪ