Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜಕೀಯ ಪಕ್ಷದ ನಿಧಿ ಪಾರದರ್ಶಕವಾಗಿಸಲು ಕ್ರಮ– ಅರುಣ್‌ಜೇಟ್ಲಿ

ರಾಜಕೀಯ ಪಕ್ಷದ ನಿಧಿ ಪಾರದರ್ಶಕವಾಗಿಸಲು ಕ್ರಮ– ಅರುಣ್‌ಜೇಟ್ಲಿ
ನವದೆಹಲಿ , ಭಾನುವಾರ, 7 ಜನವರಿ 2018 (19:17 IST)
ರಾಜಕೀಯ ಪಕ್ಷಗಳ ನಿಧಿ ಇನ್ನಷ್ಟು ಶುದ್ದ ಹಾಗೂ ಪಾರದರ್ಶಕವಾಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜಕೀಯ ವ್ಯವಸ್ಥೆಯಲ್ಲಿ ಧನಸಹಾಯ ದೇಣಿಗೆಗಳನ್ನು ತೆಗೆದುಕೊಳ್ಳುವುದು ಮತ್ತು ಖರ್ಚುಗಳನ್ನು ನಡೆಸುವುದು ಎಂದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಆದರೆ, ಬಹುತೇಕ ಹಣ ಅನಾಮಧೇಯ ಮೂಲಗಳಿಂದ ಬರುತ್ತದೆ. ರಾಜಕೀಯ ಪಕ್ಷಗಳು ಹಣದ ಪ್ರಮಾಣವನ್ನು ಎಂದಿಗೂ ಬಹಿರಂಗಪಡಿಸುವುದಿಲ್ಲ. ಈ ವ್ಯವಸ್ಥೆಯು ಕಪ್ಪು ಹಣದ ಇರುವಿಕೆಯನ್ನು ಸಾಬೀತುಪಡಿಸುತ್ತದೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಷೀರ್, ದೀಪಕ್ ಸಹೋದರರಿದ್ದಂತೆ– ಸಚಿವ ಖಾದರ್