ಈ ಘಟನೆಗೆ ಸಂಬಂಧಿಸಿದಂತೆ ಪಾರ್ರೋಡಿ ಪೊಲೀಸರು 10 ಜನರನ್ನು ಬಂಧಿಸಿದ್ದಾರೆ. ಆರೋಪಿ ನಕುಲ್ ಪಟೇಲ್ ಅವರ ಸೋದರಳಿಯ 4-5 ತಿಂಗಳಿಂದ ಅಸ್ವಸ್ಥನಾಗಿದ್ದ. ದುಕಾಲ್‌ಹೀನ್ ಬಾಯಿ ಅವನಿಗೆ ಮಾಟ ಮಾಡಿದ್ದಾಳೆಂದು ನಕುಲ್ ಕುಟುಂಬ ಶಂಕಿಸಿತು. ಸಂಜೆ ಅವಳನ್ನು ಸುತ್ತುವರಿದ ಕುಟುಂಬ ಮಾಟ ಮಾಡಿದ್ದಾಳೆಂದು ಆರೋಪಿಸಿ ಥಳಿಸಲಾರಂಭಿಸಿದರು. ಅವಳನ್ನು ವಿವಸ್ತ್ರಗೊಳಿಸಿ, ಗುಪ್ತಾಂಗ, ಮೂಗು ಮತ್ತು ಕಣ್ಣುಗಳಲ್ಲಿ ಕಾರದ ಪುಡಿಯನ್ನು ತೂರಿಸಿದರು.
ಮಾಟಗಾತಿ ಎಂದು ಶಂಕಿಸಲಾದ 55 ವರ್ಷ ವಯಸ್ಸಿನ ಮಹಿಳೆಯನ್ನು ಅವಳ ಕುಟುಂಬದವರೇ ವಿವಸ್ತ್ರಗೊಳಿಸಿ ಚೆನ್ನಾಗಿ ಥಳಿಸಿ ಗುಪ್ತಾಂಗದಲ್ಲಿ ಕಾರದ ಪುಡಿ ತುರುಕಿದ ಅಮಾನವೀಯ ಘಟನೆ ಚತ್ತೀಸಗಢದ ಬೆಮೆಟಾರಾ ಗ್ರಾಮದಲ್ಲಿ ಸಂಭವಿಸಿದೆ. ಮಹಿಳೆ ತೀವ್ರ ನೋವಿನಿಂದ ನರಳಿ, ನರಳಿ ಕೊನೆಯುಸಿರೆಳೆದಾಗ ಗ್ರಾಮಸ್ಥರು ಮೂಕಪ್ರೇಕ್ಷಕರಾಗಿ ನೋಡುತ್ತಾ ನಿಂತಿದ್ದರು.
ದುಕಾಲೀನ್ ಸಹಾಯಕ್ಕಾಗಿ ಯಾಚಿಸಿದರೂ ಗ್ರಾಮಸ್ಥರು ಭಯದಿಂದ ನೆರವಿಗೆ ಬರದೇ ಮೂಕ್ಷಪ್ರೇಕ್ಷಕರಂತೆ ನೋಡುತ್ತಿದ್ದರು.ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 10 ಜನರ ಮೇಲೆ ಕೇಸು ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ.