ಬೆಂಗಳೂರು:
ಪ್ರಕರಣ ಸಂಬಂಧಿಸಿ ಸಿಸಿಬಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು,ಆರೋಪಿಯ ಹಣಕಾಸಿನ ವ್ಯವಹಾರದ ಕುರಿತು ಮಾಹಿತಿಗಳನ್ನು ಕಲೆ ಹಾಕಿದೆ.ಆರೋಪಿಗೆ ಮೊದಲು ಟ್ಯಾನ್ಸ್ ಫರ್ ಆಗಿದ್ದು ಕೇವಲ ಮೂರು ಸಾವಿರ ರೂ. ಎನ್ನಲಾಗಿದೆ.
ರಾಜಸ್ಥಾನದ ಕೆಲ ಫೋಟೋಗಳನ್ನು ಕಳುಹಿಸಿದ್ದಕ್ಕೆ ಈ ಹಣ ವರ್ಗಾವಣೆಯಾಗಿದೆ. ಅದು ಕರಾಚಿಯಿಂದ ಹಣ ಟ್ರಾನ್ಸ್‌ಫರ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅದಾದ ಬಳಿಕ ಈತ ನಕಲಿ ಆಫೀಸರ್ ಅಂಥ ಐಎಸ್‌ಐಗೆ ಗೊತ್ತಾಗಿದೆ ಎನ್ನಲಾಗಿದೆ.
ಇದೇ ಜೂನ್ ನಲ್ಲಿ ದೆಹಲಿಯಲ್ಲಿ ದೇಶದ್ರೋಹದ ಆರೋಪದಡಿ ಓರ್ವ ನನ್ನು ಬಂಧಿಸಲಾಗಿತ್ತು. ಆತನ ಮಾಹಿತಿ ಮೇರೆಗೆ ಆಂಧ್ರ ಪ್ರದೇಶದಲ್ಲಿ ಮೂವರ ಬಂಧನ ಆಗಿತ್ತು. ಆ ಮೂವರ ವಿಚಾರಣೆ ವೇಳೆ ಜೀತೇಂದರ್ ಸಿಂಗ್ ಬಗ್ಗೆ ಕೂಡ ಮಾಹಿತಿ ಲಭ್ಯವಾಗಿತ್ತು ಎನ್ನಲಾಗಿದೆ.