ಬೆಳಗಾವಿ ಆರ್ಮಿ ರಿಕ್ರೂಟಿಂಗ್ ಕಚೇರಿಯಿಂದ ಡಿಸೆಂಬರ್ 11 ರಿಂದ 20ರವರೆಗೆ ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕ್ರೀಡಾಕೂಟದ ಮೈದಾನದಲ್ಲಿ ಬೃಹತ್ ಸೇನಾ ನೇಮಕಾತಿ ರ್ಯಾಲಿ ನಡೆಯಲಿದೆ.
ರ್ಯಾಲಿಯಲ್ಲಿ ಭಾಗವಹಿಸಲು ಅರ್ಹ ಪುರುಷ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ನೋಂದಣಿಗೆ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ಟೆಕ್ನಿಕಲ್ (ಎವಿಯೇಶನ್ ಆಂಡ್ ಅಮ್ಯುನೀಶನ್ ಎಕ್ಸಾಮಿನರ್), ಸೋಲ್ಜರ್ ಕ್ಲರ್ಕ್/ಎಸ್.ಕೆ.ಟಿ., ಸೋಲ್ಜರ್ ಟ್ರೇಡ್ಸ್‍ಮೆನ್, ಸಿಫಾಯಿ ಫಾರ್ಮಾ, ಹವಾಲ್ದಾರ (ಸರ್ವೇಯರ್ ಅಟೋಮೇಟೆಡ್ ಕಾರ್ಟೋಗ್ರಾಫರ್) ಹಾಗೂ ಜೂನಿಯರ್ ಕಮೀಷನ್ಡ್ ಆಫೀಸರ್ (ಧಾರ್ಮಿಕ ಶಿಕ್ಷಕ) ಹುದ್ದೆಗಳ ಭರ್ತಿಗಳಿಗೆ ಭರ್ತಿ ರ್ಯಾಲಿ ನಡೆಯಲಿದೆ. ಈಗಾಗಲೇ ಅಕ್ಟೋಬರ್ 26 ರಿಂದ www.joinindianarmy.nic.inವೆಬ್‍ಸೈಟ್‍ನಲ್ಲಿ ನೋಂದಣಿ ಪ್ರಾರಂಭಗೊಂಡಿದೆ.
ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಲು 2018ರ ಡಿಸೆಂಬರ್ 4 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಡಿಸೆಂಬರ್ 6 ಹಾಗೂ 7ರ ನಂತರ ತಮ್ಮ ನೊಂದಾಯಿತ ಇಮೇಲ್‍ನಿಂದ ಅಡ್ಮಿಟ್ ಕಾರ್ಡ್ ಪಡೆದು ರ್ಯಾಲಿ ನಡೆಯುವ ಸ್ಥಳದಲ್ಲಿ ಹಾಜರಿರಬೇಕು. ಬೆಳಗಾವಿಯ ಆರ್ಮಿ ರಿಕ್ರೂಟಿಂಗ್ ಕಚೇರಿಯಿಂದ ನಡೆಯಲಿರುವ ಈ ಸೇನಾಭರ್ತಿ ರ್ಯಾಲಿಯಲ್ಲಿ ಬೆಳಗಾವಿ, ಬೀದರ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಆಸಕ್ತ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ.