ಬೆಂಗಳೂರು-ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ರಾಮೇಶ್ವರಂ ಕೆಫೆಯಲ್ಲಿ 9 ನಿಮಿಷ ಶಂಕಿತ ಬಾಂಬರ್ ಇದ್ದ.ಬೆಳಗ್ಗೆ 11.34ಕ್ಕೆ ಫೋನ್ ನಲ್ಲಿ ಮಾತನಾಡುತ್ತಾ ಕೆಫೆಗೆ ಎಂಟ್ರಿ ಕೊಟ್ಟಿದ್ದಾನೆ.9 ನಿಮಿಷದಲ್ಲಿ ಇಡ್ಲಿ ತಿಂದು ಬ್ಯಾಗ್ ಬಿಟ್ಟು ಶಂಕಿತ ತೆರಳಿದ್ದ್ದಾನೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಶಂಕಿತನ ಮತ್ತಷ್ಟು ಸಿಸಿಟಿವಿ ಲಭ್ಯವಾಗಿದೆ.ಶಂಕಿತ ಕೆಫೆಗೆ ಎಂಟ್ರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಯಾರಿಗೂ ಅನುಮಾನ ಬಾರದಂತೆ ಗ್ರಾಹಕನ ರೀತಿ ಶಂಕಿತ ಎಂಟ್ರಿ ಕೊಟ್ಟಿದ್ದಾನೆ.ಸರಿಯಾಗಿ 11.35 ರ ಸುಮಾರಿಗೆ ಎಂಟ್ರಿ ಕೊಟ್ಟಿರುವ ಶಂಕಿತ ಬಂದ ಕೆಲಸ ಮುಗಿಸಿ 11.43 ಸುಮಾರಿಗೆ ಕೆಫೆಯಿಂದ ಆಚೆ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ.ಸದ್ಯ ಸಿಸಿಟಿವಿ ದೃಶ್ಯಾವಳಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಕಳೆದ ಶುಕ್ರವಾರ ಇಂದಿರಾನಗರದ ಹೋಟೆಲ್ ನಲ್ಲಿ ನಡೆದ ಸ್ಫೋಟದಲ್ಲಿ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.ಆರೋಪಿ ಕೆಫೆಗೆ ಎಂಟ್ರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಯಾರಿಗೂ ಅನುಮಾನ ಬಾರದಂತೆ ಗ್ರಾಹಕನ ರೀತಿ ವರ್ತಿಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಸರಿಯಾಗಿ 11.35 ರ ಸುಮಾರಿಗೆ ಎಂಟ್ರಿ ಕೊಟ್ಟಿರುವ ಶಂಕಿತ ಬಂದ ಕೆಲಸ ಮುಗಿಸಿ 11.43 ಸುಮಾರಿಗೆ ಕೆಫೆಯಿಂದ ಆಚೆ ಹೋಗಿದ್ದಾನೆ. ಸಿಸಿಬಿ ಮತ್ತು ಎನ್‌ಐಎ ಅಧಿಕಾರಿಗಳು ಶಂಕಿತನ ವಿಡಿಯೋ ಪರಿಶೀಲನೆಗೆ ಒಳಪಡಿಸಿ ತನಿಖೆ ಮುಂದುವರೆಸಿದ್ದಾರೆ.