ರೈತರಿಗೆ ಸ್ವತಂತ್ರ ನೀಡಲಾಗಿದೆ. ಯಾವುದೇ ರೈತರ ಬೆಳೆ ಸಮೀಕ್ಷೆಯನ್ನು ಆ್ಯಪ್ ನಲ್ಲಿ ಸ್ವಂತ ರೈತನೇ ತಾನು ಬೆಳೆದಿರುವ ಬೆಳೆಯ ವಿವರವನ್ನು ಸರಕಾರಕ್ಕೆ ಮಾಹಿತಿ ನೀಡಬಹುದು. ಇದು ರಾಜ್ಯ ಸರಕಾರ ರೈತರಿಗೆ ನೀಡಿದ ಕೊಡುಗೆಯಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಫಾರ್ಮರ್ ಕ್ರಾಪ್ ಸರ್ವೇ ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ಕೃಷಿ ಸಚಿವರು, ರಾಜ್ಯ ಸರಕಾರವು ಫಾರ್ಮರ್ ಕ್ರಾಪ್ ಸರ್ವೇ ಆ್ಯಪ್ 2020-21 ನಲ್ಲಿ ರೈತ ತಾನ್ನ ಜಮೀನಿನಲ್ಲಿ ತಾನೇ ಖುದ್ದು ನಿಂತು ತನ್ನ ಬೆಳೆಯ ವಿವರವನ್ನು ಅಪ್ಲೋಡ್ ಮಾಡಬಹುದಾಗಿದೆ.
ಇದಕ್ಕೆ ಅಂಡ್ರಾಯಿಡ್ ಮೊಬೈಲ್ ಹೊಂದಿರಬೇಕು. ಒಂದು ಪಕ್ಷ ಮೊಬೈಲ್ ಹೊಂದದೇ ಇದಲ್ಲಿ ಕೃಷಿ ಇಲಾಖೆಯ ಪಿಆರ್ ಗಳಿಂದ ವಿವರ ಪೊಟೋವನ್ನು ನೋಂದಣಿ ಮಾಡಿಸಬಹುದು ಎಂದಿದ್ದಾರೆ.