ರೀಲ್ಸ್ ಸ್ಟಾರ್ ಡಿಜೆ ದೀಪು ಹೆಸರಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರದೀಪ್ ನ ಮತ್ತೊಂದು ಮುಖವಾಡ ಬಯಲಾಗಿದೆ.ಓಎಲ್ ಎಕ್ಸ್ ಪ್ರದೀಪ್ ಅಂತಲೇ ಆರೋಪಿ ಪ್ರದೀಪ್ ಫೇಮಸ್ ಆಗಿದ್ದ,ಆರೋಪಿ ಪ್ರದೀಪನ ಮೇಲಿದ ಬರೊಬ್ಬರಿ 8 ಬೈಕ್ ಕಳವು ಪ್ರಕರಣಗಳಾಗಿದ್ದು,ಪೀಣ್ಯ ಪೊಲೀಸ್ ಠಾಣೆ ಒಂದರಲ್ಲೇ 8 ಬೈಕ್ ಕಳವು ಪ್ರಕರಣ ದಾಖಲಾಗಿದೆ.ಓ ಎಲ್ ಎಕ್ಸ್ ಗ್ರಾಹಕರನ್ನ ಆರೋಪಿ ಪ್ರದೀಪ್ ಟಾರ್ಗೆಟ್ ಆಗಿದ್ದು,ಪ್ರದೀಪನಿಗಿದ್ದ ಅಡ್ಡ ಹೆಸರೇ ಓಎಲ್ ಎಕ್ಸ್ ಪ್ರದೀಪ.ಓಎಲ್ ಎಕ್ಸ್ ನಲ್ಲಿ ಬೈಕ್ ಮಾರಾಟಕ್ಕಿದೆ ಎಂದು ಜಾಹಿರಾತುಗಳನ್ನ ಆರೋಪಿ ಗಮನಿಸುತ್ತಿದ್ದ .ನಂತರ ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್ ಪಡೆದು ಎಸ್ಕೇಪ್ ಆಗುತ್ತಿದ್ದ.ಆರೋಪಿ ಪ್ರದೀಪ ಬೈಕ್ ಕದಿಯಲು ಖತರ್ನಾಕ್ ಪ್ಲಾನ್ ಮಾಡಿದ್ದ.
ಓ ಎಲ್ ಎಕ್ಸ್ ನಲ್ಲಿ ಜಾಹಿರಾತು ನೋಡಿ ಮಾಲೀಕರಿಗೆ ಕರೆ ಮಾಡುತ್ತಿದ್ದ.ನಂತರ ನಿಮ್ಮ ಬೈಕ್ ನೋಡಬೇಕು ಎಂದು ಅಡ್ರೆಸ್ ಪಡೆದು ಮಾಲೀಕರ ಮನೆ ಬಳಿ ಹೋಗುತ್ತಿದ್ದ.ಒಂದು ರೌಂಡ್ ಹೋಗಿ ಬರ್ತೀನಿ ಅಂತ ಬೈಕ್ ಹತ್ತಿ ಹೋದ್ರೆ ವಾಪಸ್ಸ ಬರ್ತಾ ಇರ್ಲಿಲ್ಲ.ನಂತರ ಬೈಕ್ ಮಾರಿ ಬಂದ ಹಣದಿಂದ ಮಜಾ ಉಡಾಯಿಸುತ್ತಿದ್ದ.ಈ ರೀತಿ ಬೈಕ್ ಕದ್ದು ಪೀಣ್ಯ ಪೊಲೀಸರ ಬಲೆಗೆ ಬಿದ್ದಿದ್ದ.
ಇದೀಗ ಬೈಕ್ ಕಳ್ಳತನ ಬಿಟ್ಟು ಇನ್ಸ್ ಟಾಗ್ರಾಂನ ಯುವತಿಯರಿಗೆ ಆರೋಪಿ ಪ್ರದೀಪ್ ವಂಚನೆ ಮಾಡ್ತಿದ್ದ.ರೀಲ್ಸ್ ಸ್ಟಾರ್ ಗಳ ಖಾತೆಯಿಂದ ಪೋಟೋ ವಿಡಿಯೋಗಳನ್ನ ಕದ್ದು ಅವರ ಹೆಸರಿನಲ್ಲೆ ನಕಲಿ ಖಾತೆ ಸೃಷ್ಟಿಸುತ್ತಿದ್ದ .ರೀಲ್ಸ್ ಸ್ಟಾರ್ ದೀಪು ಇನ್ಸ್'ಟಾಗ್ರಾಂ ಪೊಟೋಸ್ ವಿಡಿಯೋಸ್ ಬಳಸಿ ಯುವತಿಯರಿಗೆ ಗಾಳ ಹಾಕುತ್ತಿದ್ದ.ನೇರವಾಗಿ ಭೇಟಿಯಾಗದೇ ಇನ್ಸ್'ಟಾಗ್ರಾಂ ನಲ್ಲಿ ಚಾಟ್ ಮಾಡ್ತಾ ಯುವತಿಯರನ್ನ ಪಟಾಯಿಸ್ತಿದ್ದ.ಹಲವು ಯುವತಿಯರಿಂದ ಮೀಟ್ ಆಗ್ತೀನಿ ಲವ್ ಮಾಡ್ತೀನಿ ಎಂದು ಹಣ ಪಡೆದಿದ್ದ.ಕೆಲ ದಿನಗಳ ಹಿಂದಷ್ಟೇ ಡಿಜೆ ದೀಪು ಎಂಬುವವರ ಹೆಸರನಲ್ಲಿ ವಂಚನೆ ಮಾಡಿದ್ದ.ಈ ಕುರಿತು ಸೈಬರ್ ಪೊಲೀಸ್ ಠಾಣೆಗೆ ದೀಪು ದೂರು ನೀಡಿದ್ದು.ಈ ವಿಚಾರ ತಿಳಿಯುತ್ತಿದ್ದಂತೆ ಪ್ರದೀಪ ಮತ್ತೆ ಆಕ್ಟಿವ್ ಆಗಿರುವ ಕುರಿತು ಪೀಣ್ಯ ಪೊಲೀಸರು ಮಾಹಿತಿ ಸಂಗ್ರಹಸಿದ್ದಾರೆ.