Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಗರದ ಹಲವು ಕಡೆ ಸಂಚಾರ ನಡೆಸಲು ವಿದ್ಯುತ್ ಬಸ್ ಸಿದ್ಧ

ನಗರದ ಹಲವು ಕಡೆ ಸಂಚಾರ ನಡೆಸಲು ವಿದ್ಯುತ್  ಬಸ್ ಸಿದ್ಧ
bangalore , ಗುರುವಾರ, 30 ಸೆಪ್ಟಂಬರ್ 2021 (22:06 IST)
ಬೆಂಗಳೂರು: ತೈಲ ಬೆಲೆ ಏರಿಕೆಯಿಂದ ನಷ್ಟದಲ್ಲಿದ್ದ ಸಾರಿಗೆ ಇಲಾಖೆಗೆ ಎಲೆಕ್ಟ್ರಾನಿಕ್ ಬಸ್ ಬಲ ನೀಡಲಿದೆ. ಅಷ್ಟೇ ಅಲ್ಲದೇ ಪರಿಸರ ಸ್ನೇಹಿಯಾಗಲಿದೆ.‌ ರಾಜ್ಯದ ಮೊದಲ ಇ- ಬಸ್ ಸಂಚಾರ ಆರಂಭಿಸುವ ಮೂಲಕ ಸಿಲಿಕಾನ್ ಸಿಟಿ ಮಾಲಿನ್ಯ ಮುಕ್ತವಾಗಲಿದೆ.
ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ 50 ಕೋಟಿ ರೂ. 90 ಎಲೆಕ್ಟ್ರಿಕ್ ಬಸ್​​ಗಳಿಗೆ ಉಪಯೋಗಿಸುತ್ತಿದೆ. ಒಟ್ಟು ಒಪ್ಪಂದ ವೆಚ್ಚ (ಜಿಸಿಸಿ) ಗುತ್ತಿಗೆಯಡಿ ಜೆಬಿಎಂ ಸಂಸ್ಥೆ ಈ ಬಸ್​​ಗಳನ್ನು ಸಿದ್ಧಪಡಿಸಿದ್ದು, ಎನ್ ಟಿ ಪಿ ಸಿ ವ್ಯಾಪರ್ ವಿದ್ಯುತ್ ನಿಗಮ ಈ ಬಸ್​​ಗಳ ನಿರ್ವಹಣೆ ಮಾಡಲಿದೆ. ಈ ಬಸ್​​ಗಳು ಬಿಎಂಟಿಸಿ ಒಡೆತನಕ್ಕೆ ಬರುವುದಿಲ್ಲ. ಬದಲಾಗಿ 10 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ಎನ್​​​ಟಿಪಿಸಿ ವ್ಯಾಪರ್ ವಿದ್ಯುತ್ ನಿಗಮ ಇದರ ಜವಾಬ್ದಾರಿ ಹೊತ್ತಿದ್ದು, ದಿನಕ್ಕೆ 180 ಕಿ.ಮೀ ವ್ಯಾಪ್ತಿಯಲ್ಲಿ ಮೆಟ್ರೋ ಫೀಡರ್ ಆಗಿ ಸೇವೆ ಸಲ್ಲಿಸಲಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಬಿಎಂಟಿಸಿಗೆ ಸೇರ್ಪಡೆಗೊಂಡ ಮೊದಲ ಎಲೆಕ್ಟ್ರಿಕ್ ಬಸ್ಸನ್ನು ಕೆಂಗೇರಿ ಬಸ್ ಡಿಪೋದಲ್ಲಿ ಪರಿಶೀಲನೆ ನಡೆಸಿ ಮಾತನಾಡಿದ ಸಾರಿಗೆ ಸಚಿವ ಬಿ.ಶ್ರೀರಾಮುಲು, ಪರಿಸರ ಹಾಗೂ ಜನಸ್ನೇಹಿ ಸಾರಿಗೆ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಇ- ಬಸ್ ಸೇವೆಗೆ ಚಾಲನೆ ನೀಡಲಾಗಿದೆ ಎಂದರು.
90 ಬಸ್‍ಗಳು ಬಿಎಂಟಿಸಿಗೆ  ಸೇರ್ಪಡೆಗೊಳ್ಳಲಿವೆ. 9 ಮೀಟರ್ ಉದ್ದದ ಈ ಬಸ್‍ಗಳ ಖರೀದಿಗೆ ಸ್ಮಾರ್ಟ್ ಸಿಟಿ ಯೋಜನೆಯಡಿ 50 ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಎಲ್ಲಾ ಬಸ್‍ಗಳು ಬೆಂಗಳೂರಿನಲ್ಲಿ ಸಂಚರಿಸಲಿವೆ. ಫೇಮ್ 2 ಯೋಜನೆಯಡಿ 12 ಮೀಟರ್ ಉದ್ದದ 300 ಎಲೆಕ್ಟ್ರಿಕ್ ಬಸ್ ಖರೀದಿಗೆ ಈಗಾಗಲೇ ಟೆಂಡರ್ ಮುಗಿದಿದ್ದು  ಮುಂದಿನ ವರ್ಷದಲ್ಲಿ ನಗರಕ್ಕೆ ಆಗಮಿಸಲಿವೆ ಎಂದರು‌.
ಪ್ರಸ್ತುತ ಪರಿಶೀಲನೆಗೆ ಬಂದಿದ್ದೇನೆ  ನವೆಂಬರ್ ಮಾಹೆಯಲ್ಲಿ ಎಲ್ಲಾ ಇ- ಬಸ್‍ಗಳನ್ನು ಸಿ ಎಂ ಬಸವರಾಜ ಬೊಮ್ಮಾಯಿ ಅವರು ವಿಧಾನ ಸೌಧದ ಮುಂಬಾಗದಲ್ಲಿ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ಮಾತನಾಡಿ, ನೂತನ ಇ- ಬಸ್ ಹೊಗೆ ರಹಿತ ಸೇವೆಯನ್ನು ನೀಡಲು ಸಾರಿಗೆ ಸಂಸ್ಥೆ ಮುಂದಾಗಿದೆ. ಡೀಸೆಲ್ ಬಸ್‍ಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ವೆಚ್ಚದ ನಿರ್ವಹಣೆ ಹೊಂದಿದೆ ಎಂದು ಹೇಳಿದರು. 
ಫೇಮ್ 2 ಯೋಜನೆಯಡಿಯಲ್ಲಿ ಮುಂದಿನ 3 ವರ್ಷಗಳಲ್ಲಿ ಇನ್ನೂ 900 ಬಸ್ ಖರೀದಿ ಗೆ ಈಗಾಗಲೇ ಒಪ್ಪಗೆ ದೊರೆತ್ತಿದ್ದು, ವಾರ್ಷಿಕವಾಗಿ 300 ಬಸ್‍ಗಳ ಸೇವೆಯನ್ನು ಆರಂಭಿಸಲಿದೆ. ಇದೇ ನವೆಂಬರ್ 1 ರ ಒಳಗೆ ಕನಿಷ್ಠ 10 ಬಸ್‍ಗಳನ್ನು ನಗರದಲ್ಲಿ ಓಡಾಡಲು ತಿರ್ಮಾನಿಸಿದ್ದು, ಡಿ.15 ರ ಒಳಗೆ ಎಲ್ಲಾ  90 ಬಸ್‍ಗಳ ಸೇವೆಯನ್ನು ಆರಂಭಿಸಲಾಗುವುದು ಎಂದರು.
ಬಿಎಂಟಿಸಿ ಅಧ್ಯಕ್ಷ ಎನ್.ಎಸ್. ನಂದೀಶ್‍ರೆಡ್ಡಿ, ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್, ಬಿಎಂಟಿಸಿ ಎಂಡಿ. ಅನ್ಬುಕುಮಾರ್, ಮಾಜಿ ಸಂಸದ ಫಕೀರಪ್ಪ, ಮತ್ತಿತರರು ಉಪಸ್ಥಿತರಿದ್ದರು.
ಖಾಸಗಿ ಸಂಸ್ಥೆಯಿಂದ ಚಾಲಕ ನಿಯೋಜನೆ:
ಪ್ರತಿ ಕಿ.ಮೀ ಗೆ 51.67 ರೂ.ಯನ್ನು ಬಿಎಂಟಿಸಿ ಸಂಸ್ಥೆಗೆ ಕೊಡಲಿದೆ. ಖಾಸಗಿ ಸಂಸ್ಥೆಯೇ ತನ್ನ ಬಸ್​​ಗೆ ಚಾಲಕರನ್ನು ನಿಯೋಜಿಸಲಿದೆ. ಜತೆಗೆ ಚಾರ್ಜಿಂಗ್ ವ್ಯವಸ್ಥೆ ನಿರ್ವಹಣೆಯನ್ನೂ ನೋಡಿಕೊಳ್ಳಲಿದೆ. ಕೆಲಸದ ಮಧ್ಯೆ ಒಂದು ಬಾರಿ ಚಾರ್ಜ್ ಮಾಡಲು 45 ನಿಮಿಷಗಳು ಬೇಕಾಗಿದ್ದು, 120 ಕಿ.ಮೀ ಓಡಿಸಬಹುದಾಗಿದೆ.
 
ಬಸ್ ನಲ್ಲಿ 33 ಆಸನಗಳು: 
ಕೆಂಗೇರಿ, ಕೆ.ಆರ್.ಪುರಂ, ಯಶವಂತಪುರ ಸುತ್ತಮುತ್ತ ಮೆಟ್ರೋ ಫೀಡರ್ ಆಗಿ ಎಲೆಕ್ಟ್ರಿಕ್ ಬಸ್​​ಗಳು ಕಾರ್ಯ ನಿರ್ವಹಿಸಲಿದೆ. ಈ ಬಸ್​​ನಲ್ಲಿ 33 ಜನ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಪ್ರತೀ ಸೀಟ್​​ನಲ್ಲಿ ಎಮರ್ಜೆನ್ಸಿ ಬಟನ್ ವ್ಯವಸ್ಥೆ ಮಾಡಲಾಗಿದೆ.
ಒಂದೊಂದು ಬಸ್​​ಗೂ ಬಿಎಂಟಿಸಿ 45 ಲಕ್ಷ ರೂ.ಯನ್ನು ಸಂಸ್ಥೆಗೆ ನೀಡಿದೆ. ಉಳಿದಂತೆ ಕಂಡಕ್ಟರ್​ನ್ನು ಬಿಎಂಟಿಸಿ ವತಿಯಿಂದಲೇ ನೇಮಿಸಲಾಗುತ್ತದೆ. ಟಿಕೆಟ್ ಹಣವನ್ನೂ ಬಿಎಂಟಿಸಿಯೇ ಪಡೆಯಲಿದೆ. ಪ್ರತಿಯಾಗಿ ಕಿ.ಮೀ ಗೆ 51 ರೂ.ಯಂತೆ ಬಿಎಂಟಿಸಿ ಖಾಸಗಿ ಸಂಸ್ಥೆಗೆ ಕೊಡಲಿದೆ
bus

Share this Story:

Follow Webdunia kannada

ಮುಂದಿನ ಸುದ್ದಿ

ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯ ಅಧಿಸೂಚನೆ