ಬೆಂಗಳೂರು : ರಾಜ್ಯದ ಸಿಎಂ ಆಗಿ ಬಿಎಸ್ ವೈ ಹಾಗೂ ದೇಶದ ಗೃಹಮಂತ್ರಿಯಾಗಿ ಅಮಿತ್ ಶಾ ಇಬ್ಬರೂ ಸೇರಿ ಸಂವಿಧಾನವನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಹುಬ್ಬಳ್ಳಿ ಪಕ್ಷದ ಸಭೆಯಲ್ಲಿ ಸಿಎಂ ಬಿಎಸ್ ವೈ ಮೈತ್ರಿ ಸರ್ಕಾರವನ್ನು ನಾನೊಬ್ಬನೇ ಬೀಳಿಸಿಲ್ಲ. ಅಮಿತ್ ಶಾ ಮಾರ್ಗದರ್ಶನದಂತೆ ಮಾಡಿದ್ದೇನೆ ಎಂಬ ಹೇಳಿಕೆಯ ವಿಡಿಯೋ ಬಗ್ಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ ಮಾತನಾಡಿದ್ದು ಎಲ್ಲಾ ಮಾದ್ಯಮಗಳಲ್ಲಿಯೂ ವರದಿಯಾಗಿದೆ. ಇಡೀ ದೇಶಕ್ಕೆ ಗೊತ್ತಾಗಿದೆ. ಮೈತ್ರಿ ಸರ್ಕಾರ ಬೀಳಿಸಲು ಶಾಸಕರನ್ನು ಅಮಿತ್ ಶಾ ಮಾನಿಟರ್ ಮಾಡಿದ್ದಾರೆ ಎಂದು ಬಿಎಸ್ ವೈ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಅವರಿಬ್ಬರು 10ನೇ ಶೆಡ್ಯೂಲ್ ನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿ ರಾಜ್ಯಪಾಲರಿಗೆ ದೂರು ನೀಡಿದ್ದು, ರಾಷ್ಟ್ರಪತಿಗಳಿಗೂ ಕಳುಹಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.