ಐತಿಹಾಸಿಕ ಹಂಪಿಯಲ್ಲಿ ಹೋಳಿ ಹಬ್ಬದ ಅಂಗವಾಗಿ ದೇಶಿ ಮತ್ತು ವಿದೇಶಿ ಪ್ರವಾಸಿಗರು ಸೇರಿ ಪ್ರತಿ ವರ್ಷದಂತೆ ಹೋಳಿ ಹಬ್ಬ ಆಚರಿಸಿದರು.
ಕೊರೊನಾ ವೈರಸ್ ಭೀತಿಯಿಂದ ಹೋಳಿ ಆಚರಣೆ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ನಿರಾಸಕ್ತಿ ತೋರಿದ್ದರೂ, ಇಲ್ಲಿ ಮಾತ್ರ ಯಾವುದೇ ಸೋಂಕಿನ ಭಯವಿಲ್ಲದೆ ಜನತೆ ಒಬ್ಬರ ಮೇಲೆ ಒಬ್ಬರು ರಂಗು ರಂಗಿನ ಪುಡಿ ಎರಚುತ್ತ, ಭಾರಿಸುತ್ತಿದ್ದ ತಮಟೆ ವಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ಸಂಭ್ರಮಿಸಿದರು.
ಪ್ರತಿ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಳ್ಳಾರಿ ಸೇರಿದಂತೆ ವಿವಿಧ ಕಡೆ ಹೋಳಿಯಾಟ ಕೆಲವು ಪ್ರದೇಶಗಳನ್ನು ಬಿಟ್ಟರೆ ಬಹಳ ಕಡಿಮೆಯಾಗಿದೆ.
ಆದರೆ ಹಂಪಿಯಲ್ಲಿ ಮಾತ್ರ ಪ್ರತಿ ವರ್ಷದಂತೆ ವಿದೇಶಿ ಪ್ರವಾಸಿಗರು ಹೋಳಿಯಾಟದಲ್ಲಿ ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ.