ಮಳೆಗಾಲ ಆರಂಭವಾದ್ರೆ ಸಾಕು ಜಲಪಾತಗಳತ್ತ ಪ್ರವಾಸಿಗರು ಮುಖ ಮಾಡತ್ತಾರೆ...ಅದರಲ್ಲೂ ಮೂರು ರಾಜ್ಯಗಳ ಗಡಿಯಲ್ಲಿ ಇರುವ ಆ ಚಲುವೆಯನ್ನ ಕಣ್ಣತ್ತುಂಬಿ ನೋಡಲು ಜನಸಾಗರವೇ ಹರಿದು ಬರುತ್ತದೆ. ಅವಳ ಸೌಂದರ್ಯದ ಸೊಬಗಿನಲ್ಲಿ ಪ್ರತಿಯೊಬ್ಬರು ಮೈಮರೆತು ಹೋಗುತ್ತಾರೆ. ಅದುವೇ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಅಂಬೋಲಿ ಜಲಪಾತ.
ಮುಂಗಾರು ಮಳೆ ಆರಂಭವಾದ್ರೆ ಸಾಕು ಪ್ರತಿಯೊಬ್ಬರು ಪ್ರಸಿದ್ಧ ಪ್ರವಾಸಿ ತಾಣಗಳತ್ತ ಹೆಜ್ಜೆ ಹಾಕ್ತಾರೆ. ಯಾಕೇಂದ್ರೆ ಮಳೆಗಾಲದಲ್ಲಿ ಪ್ರಕೃತಿ ಸೊಬಗು, ಜಲಪಾತಗಳ ವೈರಾವನ್ನ ಕಣ್ಣಾರೆ ನೋಡಿ ಆನಂದಿಸಬೇಕೆಂಬ ಹಂಬಲ ಪ್ರವಸಾಗಿರದ್ದು. ಹೀಗೆ ಕರ್ನಾಟಕ, ಗೋವಾ, ಕೇರಳ , ಮಹಾರಾಷ್ಟ್ರದ ಸೇರಿದ ದೇಶದಲ್ಲಿ ಹಲವಾರು ಜಲಪಾತಗಳಿವೆ. ಜೋಗ ಜಲಪಾತ, ಗೋಕಾಕ ಪಾಲ್ಸ್ ಹೀಗೆ ಹತ್ತಾರು ಜಲಪಾತಗಳನ್ನ ನಾವು ದೂರದಿಂದ ನೋಡಿ ಆನಂದಿಸಬೇಕು. ಆದ್ರೆ ಈ ಎಲ್ಲ ಜಲಪಾತಗಳಿಂಗಿಂತಲೂ ಅಂಬೋಲಿ ಜಲಪಾತ ತುಂಬಾ ವಿಶೇಷವಾಗಿದೆ. ಅಂಬೋಲಿಯ ವೈಯಾರವನ್ನ, ಅವಳ ಸೌಂದರ್ಯವನ್ನು.... ಬೆಟ್ಟದಿಂದ ಕೆಳಕ್ಕೆ ಧುಮ್ಮುಕ್ಕು ನರ್ತನವನ್ನ ನಾವು ಸ್ವಂಯ ಸ್ಪರ್ಶಿಸಿ ಆನಂದಿಸಬಹುದಾಗಿದೆ.
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ಈ ಅಂಬೋಲಿ ಜಲಪಾತ ಬರುತ್ತದೆ. ಅಂಬೋಲಿ ಜಲಪಾತವೂ ಮಹಾರಾಷ್ಟ್ರ ರಾಜ್ಯದ ಸಿಂದುರ್ಗ ಜಿಲ್ಲೆಯ ಸಾವಂತವಾಡಿ ತಾಲೂಕಿನ ಅಂಬೋಲಿ ಗ್ರಾಮದಲ್ಲಿದೆ. ಪಶ್ಚಿಮ ಘಟ್ಟದ ಸಾಲಿನಲ್ಲಿ ಈ ಮೋಹಕ ಚಲುವೆ ಇದ್ದಾಳೆ. ಪಶ್ಚಿಮ ಘಟ್ಟದ ಬೆಟ್ಟಗಳ ಸಾಲಿನ ನೂರಾರು ಚಿಕ್ಕು-ಪುಟ್ಟ ಜಲಪಾತಗಳು ನಮಗೆ ನೋಡಲು ಸಿಗುತ್ತವೆ.. ಆದ್ರೆ ಈ ಅಂಬೋಲಿ ಜಲಪಾತ ವಿಶೇಷವೆಂದ್ರೆ ಅದು ರಸ್ತೆಗೆ ಹತ್ತಿಕೊಂಡಿದೆ. ಸುಮಾರು 40 ಅಡಿ ಎತ್ತರ ಬೆಟ್ಟದಿಂದ ಜಲದಾರೆ ಭೂಮಿಯನ್ನ ಸ್ಪರ್ಶಿಸುವ ದೃಶ್ಯವೇ ಇಲ್ಲಿ ಮನಮೋಹಕ. ಎತ್ತರದ ಬೆಟ್ಟದಿಂದ ಶುದ್ಧ ಹಾಲು ಬೀಳುತಿರುವಂತೆ ಭಾಸವಾಗುತ್ತದೆ.