ಅಂಬರೀಶ್ ಒಬ್ಬ ಗಂಭೀರತೆ ಇಲ್ಲದ ರಾಜಕಾರಣಿ, ಅಂಬರೀಶ್‌ಗೆ ನಾನು ಹಿಂದೆಯೇ ಹೇಳಿದ್ದೆ. ರಾಜಕಾರಣವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದೆ. ಅಂಬರೀಶ್ ರಾಜಕೀಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ಒಳ್ಳೆಯ ರಾಜಕಾರಣಿಯಾಗುತ್ತಿದ್ದ ಎಂದು ಹೇಳಿದ್ದಾರೆ.
ಡಾ. ರಾಜಕುಮಾರ್ ಬಿಟ್ರೆ ಜನಬೆಂಬಲವಿರುವ ವ್ಯಕ್ತಿ ಅಂಬರೀಶ್, ಅಂಬರೀಷ್ ಒಳ್ಳೆಯ ರಾಜಕಾರಣಿಯಾಗಬಲ್ಲ, ಕಾಂಗ್ರೆಸ್ ಪಕ್ಷದಲ್ಲಿರು, ನಿನಗೂ ಒಳ್ಳೆಯ ಅವಕಾಶಗಳು ಬರುತ್ತವೆ ಎಂದು ಮಾತ್ರ ಹೇಳಲು ಬಯಸುತ್ತೇನೆ ಎಂದರು.
ಅಂಬರೀಶ್ ಕಾಂಗ್ರೆಸ್ ಪಕ್ಷ ಬಿಟ್ಟು ಹೋದರೆ ಏನು ಆಗಲ್ಲ. ಆದರೆ, ಒಬ್ಬ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಂತಾಗುತ್ತದೆ ಎಂದು ತಿಳಿಸಿದ್ದಾರೆ.
ಅಂಬರೀಶ್ ರಾಜಕೀಯವನ್ನು ಗಂಭೀರವಾಗಿ ಸ್ವೀಕರಿಸಿ ಬೆಳಿಗ್ಗೆ 8 ಗಂಟೆಗೆ ತಿಂಡಿ ತಿಂದು ಕ್ಷೇತ್ರಕ್ಕೆ ಹೋದಲ್ಲಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದು ಹೇಗೆ ಅಧಿಕಾರ ದೊರೆಯುವುದಿಲ್ಲವೆಂದು ನಾನು ನೋಡುತ್ತೇನೆ ಎಂದು ಕಂದಾಯ ಖಾತೆ ಸಚಿವ ಕಾಗೋಡು ತಿಮ್ಮಪ್ಪ ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.