Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಧಾನಸೌಧದಲ್ಲಿ ಮೈತ್ರಿ- ಸಕ್ಕರೆ ನಾಡಲ್ಲಿ ಕುಸ್ತಿ....!

ವಿಧಾನಸೌಧದಲ್ಲಿ ಮೈತ್ರಿ- ಸಕ್ಕರೆ ನಾಡಲ್ಲಿ ಕುಸ್ತಿ....!
ಮಂಡ್ಯ , ಶುಕ್ರವಾರ, 14 ಡಿಸೆಂಬರ್ 2018 (20:37 IST)
ಮಂಡ್ಯದಲ್ಲಿ   ಜೆಡಿಎಸ್ - ಕಾಂಗ್ರೆಸ್ ಜಟಾಪಟಿ ಮತ್ತೆ ಮುಂದುವರಿದಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಜಟಾಪಟಿ ಮಾಡಿಕೊಂಡಿದ್ದಾರೆ.

ಮಂಡ್ಯದಲ್ಲಿ ಮತ್ತೆ  ಜೆಡಿಎಸ್ - ಕೈ ಕಾರ್ಯಕರ್ತರ ಜಟಾಪಟಿ ಶುರುವಾಗಿದೆ. K.R.ಪೇಟೆ ಕ್ಷೇತ್ರದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ - ಕೈ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.
ಜೆಡಿಎಸ್ ಕಾರ್ಯಕರ್ತರಿಂದ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಶೀಳನೆರೆ ಕ್ಷೇತ್ರದ ಜೆಡಿಎಸ್ ಜಿ.ಪಂ. ಸದಸ್ಯ ಮಂಜು ಬೆಂಬಲಿಗರಿಂದ ಕೈ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ.

ಕೆ.ಆರ್.ಪೇಟೆ ತಾಲೂಕಿನ ಹರಳಹಳ್ಳಿ ಬಳಿ ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿರುವ ಜೆಡಿಎಸ್ ಜಿ.ಪಂ.ಸದಸ್ಯ ಮಂಜು ಒಡೆತನಕ್ಕೆ ಸೇರಿದ ಕ್ರಷರ್ ಬಳಿ ಘಟನೆ ನಡೆದಿದೆ.
ಅರಣ್ಯ ಇಲಾಖೆ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪ  ಜಿ.ಪಂ.‌ಸದಸ್ಯನ ವಿರುದ್ಧ ಕೇಳಿಬಂದಿದೆ.
ಈ ವಿಚಾರವಾಗಿ ಅರಣ್ಯಾಧಿಕಾರಿಗಳು, ಮಾಜಿ ಕೈ ಶಾಸಕರ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಗೆ ತೆರಳಿದ್ದ ಕೈ ಕಾರ್ಯಕರ್ತರ ಜತೆ ಗಲಾಟೆ ನಡೆದಿದೆ.

ಮಾಜಿ ಕೈ ಶಾಸಕರೊಂದಿಗೆ ಬಂದಿದ್ದ ಕೈ ಕಾರ್ಯಕರ್ತರ ಮೇಲೆ ಮಂಜು ಬೆಂಬಲಿಗರಿಂದ ಹಲ್ಲೆಗೆ ಯತ್ನ ನಡೆದಿದೆ. ಸ್ಥಳದಲ್ಲಿ ಗುಂಪು ಘರ್ಷಣೆಯಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಕೆ.ಆರ್.ಪೇಟೆ ಪೊಲೀಸರ ದೌಡಾಯಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರಿಗೆ ಶಾಕಿಂಗ್