Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾಂಗ್ರೆಸ್ – ಜೆಡಿಎಸ್ ಸರಕಾರದಲ್ಲಿ ಮೈತ್ರಿ: ಮಂಡ್ಯದಲ್ಲಿ ಕುಸ್ತಿ!

ಕಾಂಗ್ರೆಸ್ – ಜೆಡಿಎಸ್ ಸರಕಾರದಲ್ಲಿ ಮೈತ್ರಿ: ಮಂಡ್ಯದಲ್ಲಿ ಕುಸ್ತಿ!
ಮಂಡ್ಯ , ಶುಕ್ರವಾರ, 11 ಜನವರಿ 2019 (13:54 IST)
ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರ ಆಡಳಿತದಲ್ಲಿ ದೋಸ್ತಿ ನಡೆಸುತ್ತಿದ್ದರೆ, ಮಂಡ್ಯದಲ್ಲಿ ಮಾತ್ರ ಉಭಯ ಪಕ್ಷಗಳ ನಾಯಕರು ಈಗಲೂ ಕುಸ್ತಿಯನ್ನೇ ಮುಂದುವರಿಸಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಶಂಕುಸ್ಥಾಪನೆ ಕಲ್ಲಿಗಾಗಿ ಹಾಲಿ-ಮಾಜಿ ಶಾಸಕರ ನಡುವೆ ರಾಜಕೀಯ ಶುರುವಾಗಿದೆ. ರಾಜಕೀಯ ನಾಯಕರ ಪಾಲಿಟಿಕ್ಸ್ ಫೈಟ್ಗೆ ಹೆದರಿದ ಪೊಲೀಸರು ಶಂಕುಸ್ಥಾಪನೆ ಕಲ್ಲುಗಳಿಗೆ ಬಂದೋಬಸ್ತ್ ಮಾಡಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಬೇಡ್ಕರ್ ಭವಣ ನಿರ್ಮಾಣ ಮಾಡಲಾಗುತ್ತಿದೆ. 2012 ರಲ್ಲಿ ಮಾಜಿ ಶಾಸಕ ನರೇಂದ್ರಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದ್ದರು. 2014ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಭವನ ಉದ್ಘಾಟಿಸಿದ್ದರು. ಆದರೆ ಕಳೆದ ಡಿಸೆಂಬರ್ನಲ್ಲಿ ರಾತ್ರೋರಾತ್ರಿ ಭವನದಲ್ಲಿ ಮತ್ತೊಂದು ಕಲ್ಲು ಪ್ರತ್ಯಕ್ಷವಾಗಿದ್ದು ಅದ್ರಲ್ಲಿ 2007 ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಶಂಕುಸ್ಥಾಪನೆ ಅಂತ ಬರೆಯಲಾಗಿದೆ.  ಇದು ಮಾಜಿ ಶಾಸಕ ನರೇಂದ್ರಸ್ವಾಮಿ ಬೆಂಬಲಿಗರನ್ನು ಕೆರಳಸಿದ್ದು, ಕೂಡಲೇ ಬೋಗಸ್ ಶಿಲಾನ್ಯಾಸದ ಕಲ್ಲನ್ನು ತೆಗೆಸಬೇಕೆಂದು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ವಿರುದ್ಧ ಹರಿಹಾಯ್ದಿರುವ ಹಾಲಿ ಶಾಸಕ ಡಾ.ಅನ್ನದಾನಿ, 2007 ಏಪ್ರಿಲ್ನಲ್ಲಿ ಅಂದಿನ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಶಂಕುಸ್ಥಾಪನೆ ಮಾಡಿದ್ದರು. ಅಂದು 58 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಿದ್ದರು. ಆದರೆ ನರೇಂದ್ರಸ್ವಾಮಿ ಶಾಸಕರಾಗಿದ್ದ 10 ವರ್ಷಗಳಲ್ಲಿ ನೆರವೇರಿಸಿದ್ದ ಶಂಕುಸ್ಥಾಪನಾ ಕಲ್ಲುಗಳು ನಾಪತ್ತೆಯಾಗಿವೆ ಎಂದಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಮೀನುಗಾರರ ಪತ್ತೆಗೆ ಆಗ್ರಹಿಸಿ ಹೆಚ್ಚಿದ ಒತ್ತಡ