Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೈತ್ರಿ ಸರಕಾರದ ಬಿಕ್ಕಟ್ಟು - ರಾಜ್ಯಪಾಲರ ಪ್ರವೇಶ

ಮೈತ್ರಿ ಸರಕಾರದ ಬಿಕ್ಕಟ್ಟು - ರಾಜ್ಯಪಾಲರ ಪ್ರವೇಶ
ದಾವಣಗೆರೆ , ಭಾನುವಾರ, 7 ಜುಲೈ 2019 (17:56 IST)
ರಾಜ್ಯದ ಕಾಂಗ್ರೆಸ್ – ಜೆಡಿಎಸ್ ಶಾಸಕರು ನೀಡಿರುವ ರಾಜೀನಾಮೆಯನ್ನು ಸ್ಪೀಕರ್ ಅಂಗೀಕಾರ ಮಾಡಬೇಕು. ಇಲ್ಲಾಂದ್ರೆ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎನ್ನುವ ಆಗ್ರಹ ಕೇಳಿಬರತೊಡಗಿದೆ.

ಕಾಂಗ್ರೇಸ್, ಜೆಡಿಎಸ್ ಮೈತ್ರಿಯಾಗಿ ಅಧಿಕಾರಕ್ಕೆ‌ ಬಂದ್ರೂ‌ ಜನಪರ ಕೆಲಸ ಮಾಡಿಲ್ಲ. ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಇನ್ನೆರಡು ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗುತ್ತೆ.

ಸಭಾಧ್ಯಕ್ಷರು ಶಾಸಕರ ರಾಜೀನಾಮೆ ಅಂಗೀಕರಿಸಬೇಕು. ಇಲ್ಲದಿದ್ದರೆ ರಾಜ್ಯಪಾಲರು ಮಧ್ಯ ಪ್ರವೇಶ ಮಾಡ ಬೇಕು. ಹೀಗಂತ ದಾವಣಗೆರೆಯಲ್ಲಿ ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಗೌರವ ಇದ್ರೆ ಕೂಡಲೇ ರಾಜೀನಾಮೆ ನೀಡಲಿ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ನಿಶ್ಚಿತ. ಯಡಿಯೂರಪ್ಪ ಸಿಎಂ ಆಗೋದು ಸತ್ಯ. ಅಧಿವೇಶನಕ್ಕೂ ಮುನ್ನ ಸರ್ಕಾರ ಬೀಳತ್ತೆ ಅಂದಿದ್ದೆ. ಅದು ಆಗಿದೆ. ನಾವು ಆಪರೇಷನ್ ಮಾಡೋಲ್ಲ. ಬಿಜೆಪಿ ಆಪರೇಷನ್ ಆಗತ್ಯವಿಲ್ಲ ಎಂದರು.  

ಸ್ವಾಭಿಮಾನಕ್ಕೆ ಧಕ್ಕೆಯಾಗಿ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ರಾಷ್ಟ್ರೀಯ ನಾಯಕರು ಯಾರೂ ಕೂಡ ಆಪರೇಷನ್ ಮಾಡಿಲ್ಲ. ಹೀಗಂತ ದಾವಣಗೆರೆಯಲ್ಲಿ ಶಾಸಕ ರೇಣುಕಾಚಾರ್ಯ ಹೇಳಿದ್ರು.




Share this Story:

Follow Webdunia kannada

ಮುಂದಿನ ಸುದ್ದಿ

‘ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ’