ಕಾಂಗ್ರೆಸ್ ಶಾಸಕರು ತಮ್ಮ ಶಾಸಕಸ್ಥಾನಕ್ಕೆ ನೀಡಿರುವ ರಾಜೀನಾಮೆ ಪ್ರಜಾಪ್ರಭುತ್ವಕ್ಕೆ ಮಾಡಿರುವ ಅಪಮಾನ ತರುವ ಸಂಗತಿ ಎಂಬ ಆರೋಪ ಕೇಳಿಬಂದಿದೆ.
ಕೈ ಪಡೆ ಶಾಸಕರು ನೀಡಿದ್ದು ಅತ್ಯಂತ ನಾಚಿಕೆಗೇಡಿನ ವಿಚಾರ. ಹದಿನೈದು ದಿನ, ತಿಂಗಳಿಗೊಮ್ಮೆ ಡ್ರಾಮಾ ಮಾಡ್ತಾರೆ. ಇದೇನಾ ಪ್ರಜಾಪ್ರಭುತ್ವ? ಇಂದು ರಾಜ್ಯದಲ್ಲಿ ಸರ್ಕಾರ ಸರ್ಕಾರವಾಗಿಲ್ಲ. ವ್ಯಾಪಾರ ನಡೆಸುವ ಕಂಪೆನಿಯಾಗಿದೆ. ರಾಜೀನಾಮೆ ಕೊಟ್ಟ ಶಾಸಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ಗೆ ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಆಗಿಲ್ಲ. ಇವರು ಇನ್ನೇನೂ ಸರ್ಕಾರ ನಡೆಸುತ್ತಾರೆ? ಹೀಗಂತ ದಾವಣಗೆರೆಯಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರ ಖರೀದಿ ವಿಚಾರವು ಇದು ಮೂರನ್ನು ಬಿಟ್ಟ ರಾಜಕಾರಣವಾಗುತ್ತದೆ. ನಾಡಿನ ಜನರಿಗೆ ಗೌರವ ತೋರುವ ರೀತಿ ನಡೆದುಕೊಳ್ಳಿ ಎಂದರು.
ಇನ್ನು, ಕಾವೇರಿ ನದಿ ನೀರಿನ ಕುರಿತ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಸೋಲು ಗೆಲುವು ಚುನಾವಣೆಗೆ ಮುಗಿದ ವಿಚಾರ. ರೈತರ ರಕ್ಷಣೆ ವಿಚಾರದಲ್ಲಿ ರಾಜಕಾರಣ ಮಾಡಬಾರದು ಅಂತ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯ ಮಾಡಿದ್ದಾರೆ.