Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚುನಾವಣೆ ಹಿನ್ನೆಲೆ ಘೊಷಣೆಗಳ ಬಜೆಟ್ ಮಾಡಿದ್ದಾರೆ ವಿಪಕ್ಷಗಳ ಆರೋಪ.!

ಚುನಾವಣೆ ಹಿನ್ನೆಲೆ ಘೊಷಣೆಗಳ ಬಜೆಟ್ ಮಾಡಿದ್ದಾರೆ ವಿಪಕ್ಷಗಳ ಆರೋಪ.!
bangalore , ಶುಕ್ರವಾರ, 17 ಫೆಬ್ರವರಿ 2023 (20:34 IST)
ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಹಾಗೂ ಸಿಎಂ ಬೊಮ್ಮಾಯಿಯವರ ಎರಡನೇ ಬಜೆಟ್ ಅನ್ನ ಇಂದು ಮಂಡಿಸಿದ್ರು. ಚುನಾವಣೆಯ ಸಿದ್ದತೆ , ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು, ಜೆಡಿಎಸ್ ನ‌ ಪಂಚರತ್ನದ ರಥಯಾತ್ರೆಗೆ ಸೆಡ್ಡು ಹೊಡೆಯೋದು ಸಿಎಂ ಬೊಮ್ಮಾಯಿಯವರಿಗೆ ದೊಡ್ಡ ಸವಾಲಗಿದೆ. ಈ ಎರಡು ಅಸ್ತ್ರಗಳಿಗೆ ಬ್ರಹ್ಮಾಸ್ತ್ರ ಬಿಡೋದಕ್ಕೆ ಸಿಎಂ ಮುಂದಾಗಿದ್ದಾರೆ. ಬಜೆಟ್ ಮಂಡನೆ ನಂತ್ರ ವಿಪಕ್ಷಗಳ ಆರೋಪಕ್ಕೆ ಸಿಎಂ ಸುದ್ದಿಗೋಷ್ಟಿ ನಡೆಸೋದ್ರ ಮೂಲಕ ಆರೋಪಕ್ಕೆ ತಿರುಗೇಟು ನೀಡಿದ್ರು. 

ಇವತ್ತು ಬಜೆಟ್ ಬಳಿಕ ಸಿಎಂ ಬೊಮ್ಮಯಿ ಸ್ವತಃ ಸುದ್ದಿಗೋಷ್ಟಿ ನಡೆಸಿ ಬಜೆಟ್ ಬಗ್ಗೆ ಮತ್ತೆ ವಿವರಣೆ ನಿಡೊದ್ರ ಜೊತೆಗೆ ವಿಪಕ್ಷಗಳನ್ನ ತರಾಟೆಗೆ ತೆಗೆದುಕೊಂಡ್ರು.ಸುದ್ದಿಗೋಷ್ಟಿಯಲ್ಲಿ ಬಜೆಟ್ ಬಗ್ಗೆ ಮಾಹಿತಿ‌ ನೀಡಿದ್ರು ಸಿಎಂ ಬೊಮ್ಮಯಿ.402 ಕೋಟಿ ಹೆಚ್ಚುವರಿ ಬಜೆಟ್ ಮಂಡಿಸಿದ್ದೇವೆ.ಇದು ಆರ್ಥಿಕ ಬೆಳವಣಿಗೆ ರಾಜ್ಯದ ಸರಾಸರಿಗಿಂತ ಹೆಚ್ಚಾಗಿದೆ. ಈ ಬಾರಿ ಆರ್ಥಿಕ ಶಿಸ್ತು ಕಾಪಾಡಿಕೊಂಡು ಬಂದಿರೋದ್ರಿಂದ ಅತಿ ಹೆಚ್ಚು ತೆರಿಗೆ ಸಂಗ್ರಹ ಹೆಚ್ಚಳ ಮಾಡಿದ್ದೇವೆ.  ಇದ್ರಿಂದ ರಾಜಸ್ವ ಸ್ವೀಕೃತಿ ಹೆಚ್ಚಾಗಿದೆ, ಸರಾಸರಿ 23% ರಷ್ಟು ಹೆಚ್ಚಾಗಿದೆ. ಕಳೆದ ಬಾರಿ 72 ಸಾವಿರ ಕೋಟಿ ಸಾಲ ಪಡೆಯೋದಾಗಿ ಹೇಳಿದ್ದೆವು,ಅದರೊಳಗೆ ಸಾಲ ಮಾಡಿದ್ದೇವೆ. ಹಣಕಾಸಿನ ವರ್ಷ 2023-24ನ್ನ ಈಗ ತಾನೆ ಮಂಡನೆ ಮಾಡಿದ್ದೇನೆ. ಕೋವಿಡ್ ಕಾಲದಲ್ಲಿ ರಾಜ್ಯ ಎಲ್ಲಾ ಕೊರತೆ ಬಜೆಟ್ ಆಯ್ತು.ಆರ್ಥಿಕ ತಜ್ಞರ ಪ್ರಕಾರ ಕೊರತೆ ನೀಗಿಸಲು ಐದು ವರ್ಷ ಬೇಕು ಅಂದ್ರು, ಆದ್ರೆ ಎರಡೇ ವರ್ಷದಲ್ಲಿ ಹೆಚ್ಚುವರಿ ಆದಾಯ ಬಜೆಟ್ ಮಂಡಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ರು.

ಇನ್ನೂ ವಿಪಕ್ಷ ಆರೋಪ ಕಳೆದ ಬಜೆಟ್ ಅನುಷ್ಠಾನ ಆಗಿಲ್ಲ ಅಂತ ಆರೋಪ ಮಾಡ್ತಾವರೆ , ಅವರ ಆರೋಪಕ್ಕೆ ಅದರ ಸಂಪೂರ್ಣ ವಿವರ ಕೊಡ್ತೇವೆ. ಇನ್ನು ಬಜೆಟ್ ಗಾತ್ರ 2022-23ಕ್ಕೆ 2,65,720 ಕೋಟಿ ಇತ್ತು. ಈ ವರ್ಷ 3,09,182 ಕೋಟಿ ಗಾತ್ರದ್ದಾಗಿದ್ದು, 3ಲಕ್ಷ ಕೋಟಿ ದಾಟಿದೆ. ಇದು ನಮ್ಮ ಹಣಕಾಸಿನ ಬೆಳವಣಿಗೆಯಾಗಿದ್ದು,ನಮ್ಮ ಬೆಳವಣಿಗೆ ಮೇಲೆ ವಿಶ್ವಾಸ ಹೆಚ್ಚಾಗಿದೆ. ಫಿಸಿಕಲ್ ರೆಸ್ಪಾನ್ಸಿಬಲ್ ಆಕ್ಟ್ ಪ್ರಕಾರ ಮೂರು ಪ್ಯಾರಾಮೀಟರ್ ಪಾಲಿಸಿದ್ದೇವೆ‌ ಅಂತ ವಿಪಕ್ಷಗಳ ಆರೋಪಕ್ಕೆ ಸಿಎಂ ಬೊಮ್ಮಾಯಿ ತಿರುಗೇಟು ನೀಡುದ್ರು.

ಬಜೆಟ್ ನಲ್ಲಿ ಕೃಷಿ ಯೋಜನೆಗೆ 3 ರಿಂದ 5ಲಕ್ಷಕ್ಕೆ ಬಡ್ಡಿ ಸೇರಿದಂತೆ ಬೀಜ, ಗೊಬ್ಬರಕ್ಕೆ ಸಾಲ ಮಾಡಲು 10 ಸಾವಿರ ಭೂ ಸಿರಿ ಅಂತ ನೀಡಿ, ಯಾವುದೇ ಕರಾರು ಇಲ್ಲದೆ ನಬಾರ್ಡ್ ನಿಂದ ಶೂನ್ಯ ಬಡ್ಡಿ ಕೊಡ್ತಿದ್ದಿವಿ, 2 ಸಾವಿರ ರಾಜ್ಯ ಸರ್ಕಾರದಿಂದ ನೀಡಲಾಗುತ್ತೆ ಇನ್ನೂ ರೈತ ಕೆಲಸ ಮಾಡುವಾಗ ಅಪಘಾತವಾದಂತಹ ಸಂದರ್ಭದಲ್ಲಿ ರೈತ ಸಾವನ್ನಪ್ಪಿದ್ರೆ ಕುಟುಂಬ ಕಷ್ಟಕ್ಕೆ ಒಳಗಾಗುತ್ತೆ.ರೈತರಿಗೆ 2ಲಕ್ಷ ಸಿಗುವ  ಜೀವನ ಜ್ಯೋತಿ ಇನ್ಶೂರೆನ್ಸ್ ಮಾಡಿಸಿದ್ದೇವೆ. ಇದಷ್ಟಲ್ಲದೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಸಿಗುವಂತೆ ಮಾಡಿದ್ದೇವೆ ಇದು ರೈತರ ಪರವಾಗಿದ್ದೇವೆ ಅನ್ನೋದಕ್ಕೆ ಸಾಕ್ಷಿ ಅಂತ ಪರೋಕ್ಷವಾಗಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ರು.

ಚುನಾವಣಾ ಬಜೆಟ್ ಎಂಜ ಕಾಂಗ್ರೆಸ್ ಆರೋಪಕ್ಕೆ  ತಿರುಗೇಟು ನೀಡಿದ ಸಿಎಂ ,ಎಲೆಕ್ಷನ್ ಇದೆ ಅಂತಾ ನಾನು ಕೂಡ ಬೇಜವಬ್ದಾರಿಯುತವಾಗಿ ಘೋಷಣೆ ಮಾಡಬಹುದಿತ್ತು,ಆದರೆ ನಮ್ಮದು ಒಂದು ಜವಬ್ದಾರಿ ಯುತವಾದ ಪಕ್ಷ ಹಾಗೂ ಸರ್ಕಾರ. ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಈ ಬಜೆಟ್ ಮಾಡಿದ್ದೇವೆ.ಯಾವುದನ್ನು ಮಾಡಲು ಸಾಧ್ಯವಿಲ್ಲ ಅದನ್ನು ಬಜೆಟ್ ನಲ್ಲಿ ಹೇಳಿಲ್ಲ ಆದರೆ ಯಾವುದು ಮಾಡೋಕೆ ಸಾಧ್ಯನೋ ಅದನ್ನು ಬಜೆಟ್ ನಲ್ಲಿ ಮಾಡಿ ತೋರಿಸಿದ್ದೇವೆ. ತೆರಿಗೆ ಇಲ್ಲದೆ ಆಡಳಿತದಲ್ಲಿ ಸುಧಾರಣೆ ತಂದು ಬಜೆಟ್ ಮಂಡಿಸಿದ್ದೇವೆ. ಪಕ್ಷದಪರ್ಫಾರ್ಮೆನ್ಸ್ ಅನ್ನ ಜನ ನೋಡಿ,ಮತ್ತೊಮ್ಮೆ ಜನ ನಮ್ಮನ್ನ ಆರಿಸಿ ತರ್ತಾರೆ. ಕಾಂಗ್ರೆಸ್ ನವರು ಮಾಡಿದ ಸಾಲವನ್ನ ನಾವು ತೀರಿಸಿದ್ದೇವೆ ಅಂತ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ರು ಸಿಎಂ.

ಹಲವು ದಿನಗಳಿಂದ ಜನಪ್ರಿಯ ಬಜೆಟ್ ಘೊಷಣೆ ಮಾಡಬೇಕಂತ ಸಿಎಂ ಬೊಮ್ಮಯಿ ಸಾಕಷ್ಟು ಮುತುವರ್ಜಿ ವಹಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಗಳೊಂದಿಗೆ ಸಭೆ ಮೇಲೆ ಸಭೆ ಮಾಡಿದ್ರು. ೩.೦೩.೯೧೦ ಕೋಟಿ ಬಜೆಟ್ ಮಂಡನೆ‌ ಮಾಡಿರುವ ಸಿಎಂ ಚುನಾವಣೆ ದೃಷ್ಟಿಯಿಂದ ಬಾರಿ ಜಾಣ ನಡೆಯನ್ನು ಇಟ್ಟಿದ್ದಾರೆ. ಇನ್ನೇನು ಚುನಾವಣೆಯು ಕೂಡ ಹತ್ತಿರ ಬರುತ್ತಿದ್ದು, ಈ ಬಜೆಟ್ ಎಷ್ಟರ ಮಟ್ಟಿಗೆ ಕಾರ್ಯಗತಗೊಳ್ಳುತ್ತೆ ಅನ್ನೋದೇ ಬಾರಿ ಕುತೂಹಲ ಮೂಡಿಸಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ಜಜೆಟ್ ಬಗ್ಗೆ ಕೈ ನಾಯಕರು ವ್ಯಂಗ್ಯ