ಉಳ್ಳಾಲ: ಕಡಲ ಕೊರೆತ ತಡೆಯಲು ಕಾಮಗಾರಿ ನಿರ್ಮಾಣದಲ್ಲಿ ತೊಡಗಿದ್ದ ಬಾರ್ಜ್ ಉಳ್ಳಾಲ ಸಮೀಪ ಸಮುದ್ರ ಮಧ್ಯದಲ್ಲಿ ಸಿಲುಕಿದ್ದು, 27 ಮಂದಿ ಸಿಬ್ಬಂದಿಗಳು ಅಪಾಯಕ್ಕೊಳಗಾಗಿದ್ದರು. ಇದೀಗ ಎಲ್ಲರನ್ನೂ ರಕ್ಷಿಸಲಾಗಿದೆ.
ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿತ್ತು. ದಡದಿಂದ ಸುಮಾರು 700 ಮೀ. ದೂರದಲ್ಲಿ ಬಾರ್ಜ್ ನಿಲ್ಲಿಸಿ ಕಾಮಗಾರಿ ನಡೆಸಲಾಗಿತ್ತು. ಮಳೆಗಾಲದಲ್ಲಿ ಕಡಲ್ಕೊರೆತ ಹೆಚ್ಚಾಗುವುದನ್ನು ತಡೆಯಲು ಕಾಮಗಾರಿ ನಡೆಯುತ್ತಿತ್ತು.
ಕಲ್ಲುಗಳೆಡೆಗೆ ಬಾರ್ಜ್ ಡಿಕ್ಕಿ ಹೊಡೆದಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಬಾರ್ಜ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದವರನ್ನು ಸತತ ಕಾರ್ಯಾಚರಣೆ ನಡೆಸಿ ರಕ್ಷಿಸಿದರು. ನಿನ್ನೆಯಿಂದ ಸ್ಥಳದಲ್ಲಿ ಬೀಡು ಬಿಟ್ಟಿದ್ದ ಸಚಿವ ಯುಟಿ ಖಾದರ್ ರಕ್ಷಣಾ ಕಾರ್ಯದ ನೇತೃತ್ವ ವಹಿಸಿದ್ದರು.