Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶಾಂತಿ ನೆಮ್ಮದಿ ನೆಲೆಸಲು ಎಲ್ಲರೂ ಸಹಕರಿಸಬೇಕು: ಪೇಜಾವರ ಶ್ರೀ

ಶಾಂತಿ ನೆಮ್ಮದಿ ನೆಲೆಸಲು ಎಲ್ಲರೂ ಸಹಕರಿಸಬೇಕು: ಪೇಜಾವರ ಶ್ರೀ
ಉಡುಪಿ , ಸೋಮವಾರ, 16 ಮೇ 2022 (14:50 IST)
ಉಡುಪಿ : ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ದಂಗಲ್  ವಿಚಾರವಾಗಿ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಪ್ರತಿಕ್ರಿಯೆ ಮಾತನಾಡಿದ್ದು ಸುಪ್ರೀಂ ಕೋರ್ಟ್ ಧ್ವನಿವರ್ಧಕ ಬಳಕೆಗೆ ಮಾರ್ಗದರ್ಶನ ಮಾಡಿದೆ. ಈ ನಿಯಮಗಳನ್ನು ಪಾಲಿಸಬೇಕು ಎಂದು ಹಿಂದೂ ಸಮಾಜಕ್ಕೂ ಕರೆ ಕೊಡುತ್ತೇನೆ. ವಿಶೇಷ ದಿನಗಳು ವಿಶೇಷ ಆಚರಣೆಗಳ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಯಲ್ಲಿ ವಿಶೇಷ ಅನುಮತಿ ಪಡೆದು ಧ್ವನಿವರ್ಧಕ ಬಳಕೆ ಮಾಡೋಣ ಎಂದು ಸ್ವಾಮೀಜಿ ಹೇಳಿದ್ದಾರೆ.
 
ಯಾವುದೋ ಕಾರಣಕ್ಕೆ ಯಾವುದೋ ಕಾಲದಲ್ಲಿ ಧರ್ಮ ಕೇಂದ್ರಗಳು ಮಸೀದಿಗಳಾಗಿ ಪರಿವರ್ತಿತವಾಗಿರುತ್ತದೆ. ಯಾವುದೋ ದೇವಾಲಯವನ್ನು ಖರೀದಿ ಮಾಡಿ ಮಸೀದಿಯಾಗಿ ಪರಿವರ್ತಿಸಿದ್ದರೆ ನಮ್ಮ ಆಕ್ಷೇಪ ಇಲ್ಲ. ಯಾವುದೇ ಪೂಜಾಸ್ಥಳ ಆಗಿದ್ದರೂ ಕೂಡ ಒಂದು ಸಮಾಜದವರು  ಖರೀದಿಸಿ ಮಾರ್ಪಾಟು ಮಾಡಿದ್ದರೆ ಸಮಸ್ಯೆ ಇಲ್ಲ. ಆದರೆ ಆಕ್ರಮಿಸಿಕೊಂಡು ಪರಿವರ್ತನೆ ಮಾಡಿದ್ದರೆ ಮರು ಪರಿವರ್ತನೆ ಆಗಬೇಕಾದದ್ದು ಅನಿವಾರ್ಯ ಎಂದು ಸ್ವಾಮೀಜಿ ಹೇಳಿದರು.
 
ಈಗ ಆಗುತ್ತಿರುವ ಇಂತಹ ಬೆಳವಣಿಗೆಯನ್ನು ನಾವು ಸ್ವಾಗತಿಸುತ್ತೇವೆ.  ಈಗ ಇದೊಂದು ಕಾಲಘಟ್ಟ. ನ್ಯಾಯಾಲಯದ ತೀರ್ಪು ಎಲ್ಲರೂ ಪರಿಪಾಲಿಸಬೇಕು. ಹಿಂದೆ ಆಗಿಹೋದ ಬಗ್ಗೆ ಕೋರ್ಟ್ ತೀರ್ಮಾನ ಕೊಟ್ಟದ್ದಾದರೆ ಯಾರೂ ಇದನ್ನು ಹಿನ್ನಡೆ ಎಂದು ಭಾವಿಸಬಾರದು. ಹಿಂದೂಗಳ ಪೂಜಾ ಮಂದಿರವಾದರೆ ಹಿಂದುಗಳಿಗೆ ಬಿಟ್ಟುಕೊಡಿ. ಮುಸಲ್ಮಾನರ ದರ್ಗಾ ಆಗಿದ್ದರೆ ಮುಸಲ್ಮಾನರಿಗೆ ಬಿಟ್ಟುಕೊಡಬೇಕು. ಸುಪ್ರೀಂ ಕೋರ್ಟ್ ಮಾಡುವ ಮಾರ್ಗದರ್ಶನದಂತೆ ನಾವು ನಡೆಯುವುದು ಸೂಕ್ತ ಎಂದರು.
 
ತಪ್ಪು ಆಗಿದ್ದರೆ ಅದು ತಪ್ಪೇ ಯಾರು ಯಾವುದನ್ನು ಸಮರ್ಥನೆ ಮಾಡುವುದು ಸೂಕ್ತ ಅಲ್ಲ. ಸಂಘರ್ಷಕ್ಕೆ ಇಳಿಯದೆ ಸೌಹಾರ್ದ ದಿಂದ ಬಿಟ್ಟುಕೊಡಬೇಕು. ಶಾಂತಿ ನೆಮ್ಮದಿ ನೆಲೆಸಲು ಎಲ್ಲರೂ ಸಹಕರಿಸಬೇಕು ಎಂದು ಸ್ವಾಮೀಜಿ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಕಸದ ಲಾರಿ 40.ಕಿ.ಮೀ.ಗಿಂತ ವೇಗವಾಗಿ ಓಡುವಂತಿಲ್ಲ!