ಬೆಂಗಳೂರು: ಪಿಎಫ್ಐ ಸಂಘಟನೆ ಬ್ಯಾನ್ ಮಾಡಬೇಕು ಎಂದು ಟ್ವೀಟ್ ಮಾಡಿದ್ದ ತಮ್ಮ ನಡೆಯನ್ನ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಆರೆಸ್ಸೆಸ್ ಸಂಘಟನೆ ಬ್ಯಾನ್ ಮಾಡಲಾಗಿತ್ತು. ಸಮಾಜಘಾತುಕ ಕೆಲಸ ಯಾವುದೇ ಸಂಘಟನೆ ಮಾಡಿದರೂ ಅದು ತಪ್ಪೇ. ಹಿಂದು ಸಂಘಟನೆ, ಬೇರೆ ಸಂಘಟನೆಗಳು ಇರಬಹುದು. ಇವುಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇದು ನನ್ನ ವೈಯುಕ್ತಿಕ ನಿರ್ಧಾರವೂ ಹೌದು, ಪಕ್ಷದ ನಿರ್ಧಾರವೂ ಹೌದು ಎಂದರು.
ಪಿಎಫ್ಐ ಮಾತ್ರವಲ್ಲ, ಧರ್ಮದ ಆಧಾರದ ಮೇಲೆ ದೇಶ ಒಡೆಯುವ ಕೋಮುಭಾವನೆ ಕೆರಳಿಸುವ ಆರೆಸ್ಸೆಸ್ ಭಜರಂಗ ದಳ ಸೇರಿ ಅಂತಹ ಎಲ್ಲಾ ಸಂಘಟನೆಗಳನ್ನು ನಿಷೇಧಿಸಬೇಕು. ಬಿಜೆಪಿಯವರ ಪರಿವರ್ತನಾ ರಾಲಿಯನ್ನು ಸ್ವಾಗತಿಸುತ್ತೇನೆ. ಅವರು ಹೆಚ್ಚೆಚ್ಚು ಯಾತ್ರೆ ಮಾಡಿದಷ್ಟೂ ಕಾಂಗ್ರೆಸ್ ಗೆ ಅನುಕೂಲ ಎಂದರು.