ಪ್ರೇಮಲತಾ ದಂಪತಿಗಳ ವಿರುದ್ಧ ಪೊಲೀಸರು ಬಿ ರಿಪೋರ್ಟ್ ದಾಖಲಿಸಿದ ಹಿನ್ನೆಲೆಯಲ್ಲಿ ರಾಘವೇಶ್ವರ್ ಭಾರತಿ ಶ್ರೀಗಳ ವಿರುದ್ಧ ದೂರು ದಾಖಲಿಸುವುದಾಗಿ ಅಖಿಲ ಹವ್ಯಕ ಒಕ್ಕೂಟ ಎಚ್ಚರಿಕೆ ನೀಡಿದೆ.
ಅಖಿಲ ಹವ್ಯಕ ಒಕ್ಕೂಟದ ಮುಖಂಡ ಕೆ.ಎಚ್.ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಘವೇಶ್ವರ ಶ್ರೀಗಳು ಪ್ರೇಮಲತಾ ದಂಪತಿಗಳ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದರು.
ಪ್ರೇಮಲತಾ ದಂಪತಿಗಳಿಗೆ ರಾಘವೇಶ್ವರ್ ಶ್ರೀಗಳು ಚಿತ್ರಹಿಂಸೆ ನೀಡಿದ್ದಾರೆ ಅವರ ವಿರುದ್ಧ ಬ್ಲಾಕ್ಮೇಲ್, ಬೆದರಿಕೆ ಆರೋಪಗಳು ಸುಳ್ಳೆಂದು ಸಾಬೀತಾಗಿದೆ. 21 ದಿನಗಳ ಕಾಲ ವಿನಾಕಾರಣ ಜೈಲು ವಾಸ ಅನುಭವಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮಚಂದ್ರಪುರಮಠಕ್ಕೆ ಕೂಡಲೇ ಅಡಳಿತಾಧಿಕಾರಿಯನ್ನು ನೇಮಕ ಕುರಿತಂತೆ ಶೀಘ್ರ ಕ್ರಮ ಕೈಗೊಳ್ಳಲು ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.