ವ್ಯಕ್ತಿ ಪೂಜೆ ಬಿಟ್ಟು ಪಕ್ಷದ ಪೂಜೆ ಮಾಡಿ. ಪಕ್ಷದ ಪೂಜೆ ಮಾಡಿದರೆ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಡಿ.ಕೆ. ಶಿವಕುಮಾರ್, ರಾಹುಲ್ ಗಾಂಧಿ ನೇತೃತ್ವದ ಸರ್ವಪಕ್ಷ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
ಇದೇವೇಳೆ, ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯಲ್ಲ. ಕಾಂಗ್ರೆಸ್ ಹಿಂದೂಗಳ ಪರವಾಗಿದೆ. ಬಿಜೆಪಿ ಹಿಂದುತ್ವ ಎಂದು ಹೇಳುತ್ತೆಯಷ್ಟೇ ಕಾಂಗ್ರೆಸ್ ಹಿಂದೂಗಳ ಪರವಾಗಿದೆ. ನಾವೆಲ್ಲ ಹಿಂದೂಗಳೇ. ಕಾಂಗ್ರೆಸ್ ಸರ್ವ ಧರ್ಮಗಳ ಪಕ್ಷವೆಂದು ಹೇಳಿದರು.
ಈ ಮಧ್ಯೆ, ಸಿಎಂ ಸಿದ್ದರಾಮಯ್ಯನವರ ಆಡಳಿತ ವೈಖರಿಯನ್ನ ರಾಹುಲ್ ಗಾಂಧಿ ಹಾಡಿ ಹೊಗಳಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ಎಲ್ಲ ವರ್ಗದವರ ಬಡವರ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ಇದು ಕಾಂಗ್ರೆಸ್ ಆಡಳಿತದ ಲಕ್ಷಣ ಎಂದು ಸರ್ವ ಸದಸ್ಯರ ಸಭೆಯಲಲಿ ಹೇಳಿದ್ದಾರೆ. ಚುನಾವಣೆಗೆ ಹೊಸ ತಂಡ ರಚನೆಯಾಗಿದ್ದು, ಒಗ್ಗಟ್ಟಾಗಿ ಚುನಾವಣೆ ಎದುರಿಸುವಂತೆ ಕರೆ ನೀಡಿದ್ದಾರೆ.