ತುಮಕೂರು: ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಶತಾಯುಷಿ ಶಿವಕುಮಾರ ಸ್ವಾಮೀಜಿಗಳ ನಿಧನದ ಬೆನ್ನಲ್ಲೂ ಸಿದ್ಧಗಂಗಾ ಮಠ ಮತ್ತು ಸುತ್ತಮುತ್ತಲ ಹೋಟೆಲ್ ಗಳಲ್ಲಿಯೂ ನಿರಂತರವಾಗಿ ಅನ್ನ ದಾಸೋಹ ಮುಂದುವರಿದಿದೆ.
ಹಸಿದು ಬಂದವರಿಗೆ ಮಧ್ಯರಾತ್ರಿಯಾದರೂ ಸರಿಯೇ ಅನ್ನ ನೀಡಬೇಕು ಎಂಬುದು ಶ್ರೀಗಳ ಆಸೆಯಾಗಿತ್ತು. ತಾವು ಕಾಲೈಕ್ಯರಾದ ಮೇಲೂ ಈ ಸೇವೆ ಮುಂದುವರಿಯಬೇಕು ಎಂಬುದು ಅವರ ಬಯಕೆಯಾಗಿತ್ತು.
ಅದರಂತೆ ಅವರ ನಿಧನದ ನಂತರವೂ ನಿನ್ನೆ ರಾತ್ರಿ, ಇಂದೂ ಬೆಳಿಗ್ಗೆನಿಂದಲೇ ಉಪಹಾರ, ಊಟದ ತಯಾರಿ ನಡೆದಿದೆ. ಭಕ್ತರೂ ಊಟೋಪಚಾರಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ನೆರವಾಗುತ್ತಿದ್ದಾರೆ. 10 ಕ್ಕೂ ಹೆಚ್ಚು ಅಡುಗೆ ಮನೆ ತಯಾರಾಗಿದ್ದು, ಇವುಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಊಟದ ತಯಾರಿ ನಡೆಯುತ್ತಿದೆ. ಅಷ್ಟೇ ಅಲ್ಲದೆ, ಇಂದು ಶ್ರೀಗಳ ಗೌರವಾರ್ಥ ಸಿದ್ಧಗಂಗಾ ಮಠ ಮತ್ತು ತುಮಕೂರಿನ ಸುತ್ತಮುತ್ತಲ ಹೋಟೆಲ್ ಗಳಲ್ಲೂ ಭಕ್ತಾದಿಗಳ ಉಚಿತ ಊಟ ನೀಡಲು ನಿರ್ಧರಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ