Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯಾವುದೇ ಧರ್ಮದ ಸಂಗಾತಿಯ ಆಯ್ಕೆ ವಯಸ್ಕರ ಹಕ್ಕು: ಅಲಹಾಬಾದ್ ಹೈಕೋರ್ಟ್

ಯಾವುದೇ ಧರ್ಮದ ಸಂಗಾತಿಯ ಆಯ್ಕೆ ವಯಸ್ಕರ ಹಕ್ಕು: ಅಲಹಾಬಾದ್ ಹೈಕೋರ್ಟ್
bangalore , ಭಾನುವಾರ, 14 ನವೆಂಬರ್ 2021 (21:16 IST)
ಅಲಹಾಬಾದ್ ಹೈಕೋರ್ಟ್ ಆದೇಶಗಳನ್ನು ಪಾಲಿಸದ ಉತ್ತರ ಪ್ರದೇಶದ ಹಿರಿಯ ಸರ್ಕಾರಿ ಅಧಿಕಾರಿಗಳನ್ನು ‘ಅತ್ಯಂತ ಅಹಂಕಾರಿ’ ಎಂದು ಕರೆದಿರುವ ಸುಪ್ರೀಂ ಕೋರ್ಟ್, ರಾಜ್ಯ ಹಣಕಾಸು ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಬಂಧನಕ್ಕೆ ಅನುಮತಿ ನೀಡಿದೆ.
ಅಲಹಾಬಾದ್ ಹೈಕೋರ್ಟ್ ತನ್ನ ಆದೇಶಗಳ ಜಾರಿಗೆ ವಿಳಂಬ ಮಾಡುತ್ತಿದ್ದ ಉತ್ತರ ಪ್ರದೇಶದ ರಾಜ್ಯ ಹಣಕಾಸು ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕಂದಾಯ) ವಿರುದ್ಧ ಜಾಮೀನು ನೀಡಬಹುದಾದ ವಾರಂಟ್ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಮನವಿಯನ್ನು ವಜಾಗೊಳಿಸಿದ ಸುಪ್ರಿಂ ಅಧಿಕಾರಿಗಳನ್ನು “ಅತ್ಯಂತ ದುರಹಂಕಾರಿ” ಎಂದು ಬಣ್ಣಿಸಿದೆ.
ಸರ್ಕಾರಿ ಅಧಿಕಾರಿಗಳು 2017 ರಲ್ಲಿ “ಕಲೆಕ್ಷನ್ ಅಮೀನ್” ಗೆ ಸೇವೆಯನ್ನು ಕ್ರಮಬದ್ಧಗೊಳಿಸುವುದು ಮತ್ತು ಬಾಕಿ ಪಾವತಿಗೆ ಸಂಬಂಧಿಸಿದ ಪ್ರಕರಣ ದಾಖಲಿಸಿದ್ದರು. ನವೆಂಬರ್ 1 ರಂದು ಹೈಕೋರ್ಟ್ ಪ್ರಕರಣವನ್ನು ಆಲಿಸಿ ‘ಅಧಿಕಾರಿಗಳು ನ್ಯಾಯಾಲಯವನ್ನು “ಆಟದ ಮೈದಾನ” ಎಂದು ಪರಿಗಣಿಸುತ್ತಿದ್ದಾರೆ ಮತ್ತು ಈ ಹಿಂದೆ ಸೇವೆಯನ್ನು ಕಾಯಂಗೊಳಿಸುವ ಹಕ್ಕು ನಿರಾಕರಿಸಿದ ವ್ಯಕ್ತಿಗೆ ಬಾಕಿ ವೇತನ ನೀಡಲು ನಿರಾಕರಿಸಿದ್ದಾರೆ’ ಎಂದು ಕಿಡಿಕಾರಿತ್ತು.
“ಪ್ರತಿವಾದಿಗಳು (ಅಧಿಕಾರಿಗಳು) ಉದ್ದೇಶಪೂರ್ವಕವಾಗಿ ಉನ್ನತ ನ್ಯಾಯಾಲಯವನ್ನು ತಪ್ಪುದಾರಿಗೆಳೆದಿದ್ದಾರೆ ಮತ್ತು ಅರ್ಜಿದಾರರಿಗೆ ಬಾಕಿ ವೇತನವನ್ನು ನೀಡದೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ನೀಡಿದ ಭರವಸೆಯನ್ನು ಉಲ್ಲಂಘಿಸಿದ್ದಾರೆ. ಈ ನ್ಯಾಯಾಲಯವು ಪ್ರತಿವಾದಿಗಳ ಖಂಡನೀಯ ನಡವಳಿಕೆಯ ಬಗ್ಗೆ ದುಃಖ ಮತ್ತು ವೇದನೆಯನ್ನು ದಾಖಲಿಸುತ್ತದೆ. ಅದರಂತೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕಂದಾಯ) ಮತ್ತು ಪ್ರಸ್ತುತ ಯುಪಿ ಸರ್ಕಾರದ ಕಾರ್ಯದರ್ಶಿ (ಹಣಕಾಸು), ಲಕ್ನೋಗೆ ನಿಯೋಜಿಸಲಾದ ಅಂದಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ವಿರುದ್ಧ ಜಾಮೀನು ನೀಡಬಹುದಾದ ವಾರಂಟ್ ಹೊರಡಿಸುವುದು ಸೂಕ್ತ ಪ್ರಕರಣ ಎಂದು ನಂಬುತ್ತದೆ. ನವೆಂಬರ್ 15 ರಂದು ಈ ನ್ಯಾಯಾಲಯಕ್ಕೆ ಹಾಜರಾಗಲು ಅವಕಾಶ ಮಾಡಿಕೊಟ್ಟು ಅವರ ವಿರುದ್ಧ ಜಾಮೀನು ನೀಡಬಹುದಾದ ವಾರೆಂಟ್ ಹೊರಡಿಸುತ್ತದೆ’’ ಎಂದು ಹೈಕೋರ್ಟ್ ಆದೇಶಿಸಿತ್ತು.
ನಂತರ ಬಂಧನದಿಂದ ಪಾರಾಗಲು ಯುಪಿ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು ಅರ್ಜಿ ವಜಾಗೊಳಿಸಿ ಛೀಮಾರಿ ಹಾಕಿದೆ. “ನಿಮಗೆ ಹೆಚ್ಚಿನ ಶಿಕ್ಷೆಯ ಅಗತ್ಯವಿದೆ. ನಿಮ್ಮ ನಡವಳಿಕೆಯನ್ನು ನೋಡಿ, ನೀವು ಆದೇಶಗಳನ್ನು ಪಾಲಿಸಲು ಏನನ್ನೂ ಮಾಡಿಲ್ಲ. ಹೈಕೋರ್ಟ್ ನಿಮ್ಮ ಬಗ್ಗೆ ತುಂಬಾ ಕರುಣೆ ತೋರಿದೆ… ಆದರೆ ನಿಮಗೆ ನ್ಯಾಯಾಲಯದ ಬಗ್ಗೆ ಗೌರವವಿಲ್ಲ. ಈ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಂಬಾ ದುರಹಂಕಾರಿ ಎಂದು ತೋರುತ್ತಿದೆ” ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠ ಕಿಡಿಕಾರಿದೆ.
ನೀವು ಏನೇ ವಾದ ಮಾಡುವುದಿದ್ದರೂ ಅವರನ್ನು ಬಂಧಿಸಿ ಇಲ್ಲಿಗೆ ಕರೆತನ್ನಿ ಎಂದು ಪೀಠವು ಉತ್ತರ ಪ್ರದೇಶ ಸರ್ಕಾರದ ಪರ ವಾದಿಸಿದ ಅಡಿಷನಲ್ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿರವರಿಗೆ ಸೂಚಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ: ಸಚಿವ ಎಸ್.ಟಿ.ಸೋಮಶೇಖರ್