ರಾಜಕಾಲುವೆ ಮೇಲೆ ಮನೆ ನಿರ್ಮಾಣಕ್ಕೆ ಸರಕಾರವೇ ಒಪ್ಪಿಗೆ ನೀಡಿದ್ದರಿಂದ ಬಿಬಿಎಂಪಿ ಕೂಡಾ ಮನೆ ತೆರುವುಗೊಳಿಸಲು ಸಾಧ್ಯವಿಲ್ಲ ಎಂದು ಸರಕಾರ ಯೂ-ಟರ್ನ್ ಹೊಡೆದಿದೆ.
ವಿಧಾನಸೌಧದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜಯಚಂದ್ರ, ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ ಮನೆ ರಾಜಕಾಲುವೆ ಮೇಲೆ ನಿರ್ಮಾಣವಾಗಿಲ್ಲವಾದ್ದರಿಂದ ಮನೆ ತೆರವು ಗೊಳಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ಒತ್ತಾಯಪೂರ್ವಕವಾಗಿ ತೆರವು ಮಾಡಿದರೆ ಕೋರ್ಟ್‌ಗೆ ಹೋಗ್ತಾರೆ. ಕೋರ್ಟ್‌ಗೆ ಹೋಗುವಷ್ಟು ದಾಖಲೆಗಳು ದರ್ಶನ ಬಳಿ ಇವೆ. ಆದ್ದರಿಂದ ಮನೆ ತೆರುವುಗೊಳಿಸುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜಕಾಲುವೆ ಮೇಲೆ ಎಷ್ಟೆ ಪ್ರಭಾವಿ ವ್ಯಕ್ತಿಗಳಿದ್ದರೂ ಅವರ ಮನೆ ತೆರವುಗೊಳಿಸಲಾಗುವುದು ಎಂದು ಜಂಭ ಕೊಚ್ಚಿಕೊಂಡಿದ್ದ ಸರಕಾರ ಇದೀಗ ಬಾಲ ಮುದುಡಿ ಕುಳಿತಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ