Webdunia - Bharat's app for daily news and videos

Install App

ಆಸ್ಪತ್ರೆ ಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ-ಸಿಎಂ ಸಿದ್ದರಾಮಯ್ಯ

Webdunia
ಭಾನುವಾರ, 21 ಮೇ 2023 (19:14 IST)
ಬಾಡಿಗೆ ವಾಹನ ಪಡೆದು ಬೆಂಗಳೂರು ನಗರವನ್ನು ನೋಡಲು ಬಂದಿದ್ದರು.ಚಾಲಕ ಸೇರಿ ಏಳು ಮಂದಿ ಇದ್ದರು ಮಳೆಯ ಪ್ರಮಾಣದ ಅಂದಾಜು ಇರಲಿಲ್ಲ .ಚಾಲಕ ಅಂಡರ್ ಪಾಸ್ ಒಳಗೆ ಹೋಗಬಾರದಿತ್ತು
 
ಬಾಗಿಲುಗಳು ಓಪನ್ ಆಗಿಲ್ಲ.ನೀರಿನ ಒತ್ತಡದಿಂದಾಗಿ ಗಾಜು ಸಹ ಜಾಮ್ ಆಗಿದೆ.ಬಾನು ರೇಖಾ ತೀರವಾಗಿ ನೀರು ಕುಡಿದ ಹಿನ್ನೆಲೆ ಸಾವನಪ್ಪಿದ್ದಾರೆ.ಆಸ್ಪತ್ರೆಗೆ ತಲುಪುವ ಮುನ್ನವೇ ಅವಳ ನಿಧನವಾಗಿತ್ತು.ಆಸ್ಪತ್ರೆಯಲ್ಲಿ ತಪಾಸಣೆ ಮಾಡಲಾಯಿತು ದೃಢಪಟ್ಟ ಬಳಿಕ ಎರಡನೇ ಹಂತದಲ್ಲಿ ಇನ್ನೊಮ್ಮೆ ತಪಾಸಣೆ ಮಾಡಿದ್ದಾರೆ.ವಿಪರೀತ ನೀರು ತುಂಬಿಕೊಂಡ ಸಂದರ್ಭ ಇಲ್ಲಿನ ಸಂಚಾರವನ್ನು ಬಂದು ಮಾಡಬೇಕು.ಆದರೆ ಅನಿರೀಕ್ಷಿತವಾಗಿ ಮಳೆ ಬಂದು ಏಕಾಏಕಿ ನೀರು ತುಂಬಿದೆ.ವಾಹನದಲ್ಲಿದ್ದ ಏಳು ಮಂದಿ ಪೈಕಿ ಆರು ಮಂದಿಗೆ ಏನು ಆಗಿಲ್ಲ ಚಾಲಕ ಸಹ ಸುರಕ್ಷಿತವಾಗಿದ್ದಾನೆ.ಆಸ್ಪತ್ರೆಯಿಂದ ವಿಳಂಬ ಆಗಿದ್ದರೆ ಅದನ್ನು ವಿಚಾರಣೆ ಮಾಡೋಣ ಎಂದು  ಹೇಳಿದ್ರು.
 
ಅಲ್ಲದೇ ಆಸ್ಪತ್ರೆಯವರು ನಿರ್ಲಕ್ಷ ಮಾಡಿದ್ದರೆ ಅದರ ವಿರುದ್ಧ ತನಿಖೆ ನಡೆಸುತ್ತೇವೆ.ಸದ್ಯ ಆಸ್ಪತ್ರೆ ವೈದ್ಯರು ಈ ರೀತಿ ಪರಿಸ್ಥಿತಿ ನಿರ್ಮಾಣ ಆಗಿಲ್ಲ ಎಂದು ಹೇಳುತ್ತಾರೆ. ಮೃತ ಮಹಿಳೆ ಬೆಂಗಳೂರಿನ ಇನ್ಫೋಸಿಸ್ ನಲ್ಲಿ ಉದ್ಯೋಗ ಮಾಡುತ್ತಿದ್ದಳು.ಮೃತ ಮಹಿಳೆ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸುತ್ತಿದ್ದೇನೆ.ಆರೋಗ್ಯ ಸಮಸ್ಯೆ ಎದುರಾದವರಿಗೆ ಸರ್ಕಾರವೇ ಚಿಕಿತ್ಸೆ ವೆಚ್ಚ ನೀಡಲಿದೆ.ಮುಂಬರುವ ದಿನಗಳಲ್ಲಿ ಇಂತಹ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ.ರಾಜ ಕಾಲು ಒತ್ತುವರಿ ತೆರವನ್ನು ನಾವು ಹಿಂದೆ ಆರಂಭಿಸಿದ್ದೆವು ಆದರೆ ಅದು ಅರ್ಧಕ್ಕೆ ನಿಂತಿದೆ ಮತ್ತೊಮ್ಮೆ ಆರಂಭಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments