ಬಾಡಿಗೆ ವಾಹನ ಪಡೆದು ಬೆಂಗಳೂರು ನಗರವನ್ನು ನೋಡಲು ಬಂದಿದ್ದರು.ಚಾಲಕ ಸೇರಿ ಏಳು ಮಂದಿ ಇದ್ದರು ಮಳೆಯ ಪ್ರಮಾಣದ ಅಂದಾಜು ಇರಲಿಲ್ಲ .ಚಾಲಕ ಅಂಡರ್ ಪಾಸ್ ಒಳಗೆ ಹೋಗಬಾರದಿತ್ತು
ಬಾಗಿಲುಗಳು ಓಪನ್ ಆಗಿಲ್ಲ.ನೀರಿನ ಒತ್ತಡದಿಂದಾಗಿ ಗಾಜು ಸಹ ಜಾಮ್ ಆಗಿದೆ.ಬಾನು ರೇಖಾ ತೀರವಾಗಿ ನೀರು ಕುಡಿದ ಹಿನ್ನೆಲೆ ಸಾವನಪ್ಪಿದ್ದಾರೆ.ಆಸ್ಪತ್ರೆಗೆ ತಲುಪುವ ಮುನ್ನವೇ ಅವಳ ನಿಧನವಾಗಿತ್ತು.ಆಸ್ಪತ್ರೆಯಲ್ಲಿ ತಪಾಸಣೆ ಮಾಡಲಾಯಿತು ದೃಢಪಟ್ಟ ಬಳಿಕ ಎರಡನೇ ಹಂತದಲ್ಲಿ ಇನ್ನೊಮ್ಮೆ ತಪಾಸಣೆ ಮಾಡಿದ್ದಾರೆ.ವಿಪರೀತ ನೀರು ತುಂಬಿಕೊಂಡ ಸಂದರ್ಭ ಇಲ್ಲಿನ ಸಂಚಾರವನ್ನು ಬಂದು ಮಾಡಬೇಕು.ಆದರೆ ಅನಿರೀಕ್ಷಿತವಾಗಿ ಮಳೆ ಬಂದು ಏಕಾಏಕಿ ನೀರು ತುಂಬಿದೆ.ವಾಹನದಲ್ಲಿದ್ದ ಏಳು ಮಂದಿ ಪೈಕಿ ಆರು ಮಂದಿಗೆ ಏನು ಆಗಿಲ್ಲ ಚಾಲಕ ಸಹ ಸುರಕ್ಷಿತವಾಗಿದ್ದಾನೆ.ಆಸ್ಪತ್ರೆಯಿಂದ ವಿಳಂಬ ಆಗಿದ್ದರೆ ಅದನ್ನು ವಿಚಾರಣೆ ಮಾಡೋಣ ಎಂದು ಹೇಳಿದ್ರು.
ಅಲ್ಲದೇ ಆಸ್ಪತ್ರೆಯವರು ನಿರ್ಲಕ್ಷ ಮಾಡಿದ್ದರೆ ಅದರ ವಿರುದ್ಧ ತನಿಖೆ ನಡೆಸುತ್ತೇವೆ.ಸದ್ಯ ಆಸ್ಪತ್ರೆ ವೈದ್ಯರು ಈ ರೀತಿ ಪರಿಸ್ಥಿತಿ ನಿರ್ಮಾಣ ಆಗಿಲ್ಲ ಎಂದು ಹೇಳುತ್ತಾರೆ. ಮೃತ ಮಹಿಳೆ ಬೆಂಗಳೂರಿನ ಇನ್ಫೋಸಿಸ್ ನಲ್ಲಿ ಉದ್ಯೋಗ ಮಾಡುತ್ತಿದ್ದಳು.ಮೃತ ಮಹಿಳೆ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸುತ್ತಿದ್ದೇನೆ.ಆರೋಗ್ಯ ಸಮಸ್ಯೆ ಎದುರಾದವರಿಗೆ ಸರ್ಕಾರವೇ ಚಿಕಿತ್ಸೆ ವೆಚ್ಚ ನೀಡಲಿದೆ.ಮುಂಬರುವ ದಿನಗಳಲ್ಲಿ ಇಂತಹ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ.ರಾಜ ಕಾಲು ಒತ್ತುವರಿ ತೆರವನ್ನು ನಾವು ಹಿಂದೆ ಆರಂಭಿಸಿದ್ದೆವು ಆದರೆ ಅದು ಅರ್ಧಕ್ಕೆ ನಿಂತಿದೆ ಮತ್ತೊಮ್ಮೆ ಆರಂಭಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು.