ಮರಗಳು ಅಡ್ಡವಿರುವುದರಿಂದ ಸರಿಯಾಗಿ ಜಾಹೀರಾತು ಫಲಕ ಕಾಣುವುದಿಲ್ಲವೆಂದು ದುಷ್ಟರ್ಮಿಗಳು 30ಕ್ಕೂ ಅಧಿಕ ಮರಗಳಿಗೆ ಹಾನಿ ಮಾಡಿರುವ ಪ್ರಕರಣ ಬೆಂಗಳೂರಿನನಲ್ಲಿ ಬೆಳಕಿಗೆ ಬಂದಿದೆ.
ಮಾರತಹಳ್ಳಿ ಬಳಿಯ ಚಿನ್ನಪ್ಪನಹಳ್ಳಿಯ ಕಳಾಮಂದಿರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. 17 ಮರಗಳ ಬುಡಕ್ಕೆ ಆಸಿಡ್ ಸುರಿಯಲಾಗಿದ್ದು, 14 ಮರಗಳನ್ನ ಬುಡವರೆಗೆ ಕತ್ತರಿಸಲಾಗಿದೆ. ಘಟನೆ ಕುರಿತಂತೆ ಪರಿಶೀಲನೆ ನಡೆಸಿರುವ ಬಿಬಿಎಂಪಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ಧಾರೆ.
ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವೃಕ್ಷ ವೈದ್ಯರು ಮರಗಳು ಒಣಗುತ್ತಿರುವುದನ್ನ ಗಮನಿಸಿ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ರಾತ್ರೋರಾತ್ರಿ ಮರಗಳಿಗೆ ವಿಷಹಾಕುವ ದುಷ್ಕೃತ್ಯ ನಡೆದಿದೆ. ಮರಗಳಿಗೆ ವಿಷವಿಕ್ಕುವ ಕುಕೃತ್ಯ ಹಲವು ದಿನಗಳ ಹಿಂದೆಯೇ ನಡೆದಿದ್ದು ಬಿಬಿಎಂಪಿಯ ಮೌನ ಅನುಮಾನ ಮುಡಿಸಿದೆ.