Webdunia - Bharat's app for daily news and videos

Install App

ನ್ಯಾಯಾಲಯ ಆದೇಶ ಉಲ್ಲಂಘನೆ: ಎಸಿ ಕಚೇರಿ ಪಿಠೋಪಕರಣ ಜಪ್ತಿ

Webdunia
ಮಂಗಳವಾರ, 4 ಸೆಪ್ಟಂಬರ್ 2018 (15:40 IST)
ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವನ್ನ ಉಲ್ಲಂಘಿಸಿದ ಕಾರಣ ಉಪವಿಭಾಗಾಧಿಕಾರಿಗಳ ಕಚೇರಿಯ ಪಿಠೋಪಕರಣಗಳನ್ನ ಜಪ್ತಿ ಮಾಡಿದ ಪ್ರಕರಣ ನಡೆದಿದೆ.

ವಿಜಯಪುರ ನಗರದಲ್ಲಿ ಈ ಘಟನೆ ನಡೆದಿದೆ. ವಿಜಯಪುರ ಉಪವಿಭಾಗಾಧಿಕಾರಿಗಳ ಕಚೇರಿಯ ಪೀಠೋಪಕರಣಗಳನ್ನ ಜಪ್ತಿ ಮಾಡಲಾಗಿದೆ. ವಿಜಯಪುರ ನಗರದ ಹೊರವಲಯದ ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಇದರಲ್ಲಿ ಮಹಲ ಬಾಗಾಯತ ಕಂದಾಯ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್ 953 ಎಂಬ ಜಮೀನು ಭೂಸ್ವಾಧೀನಕ್ಕೊಳಪಟ್ಟಿತ್ತು. ಸ್ಥಳೀಯ ವಿಕ್ರಂ ಎನ್ನುವವರ ಮಾಲೀಕತ್ವದ ಈ ಜಮೀನಿನಲ್ಲಿನ ಹತ್ತು ಗುಂಟೆ & ಒಂಭತ್ತು ಗುಂಟೆ ಜಮೀನು‌ ಭೂಸ್ವಾಧೀನಕ್ಕೊಳಪಟ್ಟಿತ್ತು. ಆದರೆ ಹೆಚ್ಚುವರಿ ಪರಿಹಾರ ಮೊತ್ತ ಕೋರಿ ವಿಜಯಪುರದ ಎರಡನೇ ಅಪರ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ವಿಕ್ರಂ ಎರಡು ಪ್ರತ್ಯೆಕ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಹೆಚ್ಚುವರಿ ಮೊತ್ತ 27 ಲಕ್ಷ, ಮತ್ತು 30 ಲಕ್ಷ ಸೇರಿದಂತೆ ಒಟ್ಟಾರೆಯಾಗಿ 1 ಕೋಟಿ 40 ಲಕ್ಷ, 82 ಸಾವಿರದ 497 ರೂಪಾಯಿಗಳನ್ನ ಭರಣಾ ಮಾಡಿಕೊಡುವಂತೆ ನ್ಯಾಯಾಲಯ 2012ರ ಫೆಬ್ರುವರಿ 9 ರಂದು ಆದೇಶಿಸಿತ್ತು. ಆದರೆ ಭೂಸ್ವಾಧೀನಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿಗಳು ಹೆಚ್ಚುವರಿ ಮೊತ್ತ ಭರಣಾ ಮಾಡಿಕೊಡುವಲ್ಲಿ ವಿಫಲರಾಗುವುದಲ್ಲದೇ ನ್ಯಾಯಾಲಯದ ಆದೇಶವನ್ನ ಉಲ್ಲಂಘನೆ ಮಾಡಿದ್ದರು. ಕಾರಣ ಕಕ್ಷಿದಾರರ ಪರವಾಗಿ ನ್ಯಾಯಾಲಯದ ಆದೇಶ ಪಡೆದ ನ್ಯಾಯವಾದಿ ಸಂಗಮೇಶ ಡೊಂಗರಗಾಂವಿ ಎನ್ನುವವರು ಇಂದು ಉಪವಿಭಾಗಾಧಿಕಾರಿಗಳ ಕಚೇರಿಯ ಪಿಠೋಪಕರಣಗಳನ್ನ ಜಪ್ತಿ ಮಾಡಿದ್ದಾರೆ. ಉಪವಿಭಾಗಾಧಿಕಾರಿಗಳು ಕಚೇರಿಯಲ್ಲಿಲ್ಲದ ಕಾರಣ ಅವರ ವಾಹನವನ್ನ ಜಪ್ತಿ ಮಾಡಲಾಗಿಲ್ಲ. ಇವುಗಳನ್ನ ಹರಾಜು ಹಾಕಿ ಪರಿಹಾರ ಮೊತ್ತ ಭರಣಾ ಮಾಡಿಕೊಳ್ಳುವುದಾಗಿ ತಿಳಿಸಿದ ನ್ಯಾಯವಾದಿಗಳು, ಇನ್ನುಳಿದ ಪರಿಹಾರ ಮೊತ್ತವನ್ನ ಪಾವತಿಸುವಲ್ಲಿ ಮತ್ತಷ್ಟು ವಿಳಂಬ ಮಾಡಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments