ಶಿವಾನಂದ ಮೇಲ್ಸೇತುವೆ ಬಳಿ ಆಮ್ ಆದ್ಮಿ ಪಕ್ಷದ ನೂರಾರು ಕಾರ್ಯಕರ್ತರು ಆಗಮಿಸಿದ್ರು. ಬೆಂಗಳೂರಿಗರಿಗೆ 40 % ಕಮಿಷನ್ ಮೇಲ್ಸೇತುವೆ ಎಂಬ ನಾಮ ಫಲಕವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರುಗಳನ್ನ ಪೊಲೀಸರು ಬಂಧಿಸಿದ್ದಾರೆ.
ಪ್ರತಿಭಟನೆಯ ನೇತೃತ್ವವನ್ನು ವಹಿಸಿ ಮಾತನಾಡಿದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಈ ಸ್ಟೀಲ್ ಮೇಲ್ಸೇತುವೆಯು 19 ಕೋಟಿಗೆ ಆರಂಭಗೊಂಡು 7 ವರ್ಷಗಳ ನಂತರ 39ಕೋಟಿ ವೆಚ್ಚ ಮಾಡಿಯೂ ಅತ್ಯಂತ ಕಳಪೆ ಕಾಮಗಾರಿ ಮಾಡಿದ್ದಾರೆ. ಈ ಬಿಜೆಪಿ ಸರಕಾರ ಬೆಂಗಳೂರಿಗರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದವರು ಆಕ್ರೋಶ ವ್ಯಕ್ತಪಡಿಸಿದಾರೆ.
ಬೆಂಗಳೂರಿನಲ್ಲಿ ಇದೇ ರೀತಿಯ ಅನೇಕ ಕಾಮಗಾರಿಗಳನ್ನು ಬಿಜೆಪಿ ಸರ್ಕಾರವು 3ಮತ್ತು 4ಪಟ್ಟು ಹೆಚ್ಚಿಸಿ ಸಮಯ ವ್ಯರ್ಥ ಮಾಡುತ್ತಿದೆ . 40 %ಕಮಿಷನ್ ದಂಧೆಯಲ್ಲಿ ಮುಳುಗಿರುವ ಬಿಜೆಪಿಗೆ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮೋಹನ್ ದಾಸ್ ಎಚ್ಚರಿಸಿದಾರೆ.