ಜೀವ ಉಳಿಸಬೇಕಿದ್ದ ವೈದ್ಯರು ಮಾಡಿದ ಎಡವಟ್ಟಿನಿಂದಾಗಿ ಆ ಕುಟುಂಬ ಈಗ ಸಂಕಷ್ಟಕ್ಕೆ ಈಡಾಗಿದೆ.
ವೈದ್ಯರ ಯಡವಟ್ಟಿನಿಂದಾಗಿ ಮಹಿಳೆ ಸಾವನ್ನಪ್ಪಿದ್ದಾರೆ. ಮುನಿರತ್ನ( 25 )ಸಾವನ್ನಪ್ಪಿದ ಮಹಿಳೆಯಾಗಿದ್ದಾರೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಬಿಸಯ್ಯಗಾರಪ್ಪಲ್ಲಿ ಗ್ರಾಮದ ಮೃತ ಮಹಿಳೆ. ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಹೊಟ್ಟೆಯಲ್ಲಿ ಮಗು ಅಡ್ಡ ತಿರುಗಿದೆ ಎಂಬ ಸುಳ್ಳು ಸಲಹೆ ನೀಡಿದ ವೈದ್ಯೆಯ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ರಕ್ತ ಪರೀಕ್ಷೆ ಮಾಡಿಸಿಕೊಂಡು ಬರಲು ಸಂಬಂಧಿಕರಿಗೆ ಸೂಚಿಸಿದ ಡಾ. ರೇಣುಕಾ, ರಕ್ತ ಪರೀಕ್ಷೆ ಮಾಡಿಸಿಕೊಂಡು ಬರುವಷ್ಟರಲ್ಲಿ ಆಪರೇಷನ್ ಮಾಡಿ ಮುಗಿಸಿದ್ದರು. ಆಪರೇಷನ್ ವಿಫಲವಾದ ಕಾರಣ ವಿಕ್ಟೋರಿಯಾ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೊಟ್ಟೆಯಲ್ಲಿ ಮಗು ಇಲ್ಲ ಯಾರು ಆಪರೇಷನ್ ಮಾಡಿದ್ದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ತುರ್ತಾಗಿ ಯಲಹಂಕ ಕೆಕೆ ಆಸ್ಪತ್ರೆಗೆ ರವಾನಿಸಿದ ಕುಟುಂಬಸ್ಥರು, ವೈದ್ಯರ ತಪ್ಪು ಮಾಹಿತಿ ನಂಬಿ ಸುತ್ತಾಡಿದರೂ ಮುನಿರತ್ನ ಬದುಕಿ ಉಳಿಯಲಿಲ್ಲ.
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ವೈದ್ಯರು ಮಾಡಿದ ಯಡವಟ್ಟಿನಿಂದಾಗಿ ಆಸ್ಪತ್ರೆಯ ಮುಂದೆ ಶವ ಇಟ್ಟು ಪ್ರತಿಭಟನೆ ಮಾಡುತ್ತಿರುವ ಸಂಬದಿಕರು, ತಪ್ಪಿತಸ್ಥ ವೈದ್ಯರ ವಿರುದ್ದ ಕ್ರಮಕ್ಕೆ ಆಗ್ರಹ ಮಾಡಿದ್ದಾರೆ.