ಬೆಳಗಾವಿ: ಹಾವಿನಿಂದ ಕಡಿತಕ್ಕೊಳಗಾದ ಯುವಕನೊಬ್ಬ ತನಗೆ ಕಚ್ಚಿದ ಹಾವಿನೊಂದಿಗೆ ಚಿಕಿತ್ಸೆಪಡೆಯಲು ಆಸ್ಪತ್ರೆಗೆ ಬಂದ ಘಟನೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಹುಂಚ್ಯಾನಹಟ್ಟಿ ಗ್ರಾಮದ ಯುವಕ ಶಾಹಿದ್ (21) ಮನೆ ಬಳಿ ಹಾವು ಬಂದಿದೆ.
ಶಾಹಿದ ಹಾವು ಹಿಡಿದಿದ್ದಾನೆ. ಬಳಿಕ ಬೆಟ್ಟದ ಮೇಲೆ ಹಾವು ಬಿಡುವ ಸಂದರ್ಭದಲ್ಲಿ ಶಾಹಿದ್ಗೆ ಹಾವು ಕಚ್ಚಿದೆ. ಕೂಡಲೇ ಸ್ನೇಹಿತರೊಂದಿಗೆ ಕಚ್ಚಿದ ಹಾವನ್ನು ಡಬ್ಬದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದಿದ್ದಾನೆ.
ಯಾವ ಹಾವು ಕಚ್ಚಿದೆ ಅಂತ ಗೊತ್ತಾದರೆ, ಸುಲಭವಾಗಿ ಚಿಕಿತ್ಸೆ ನೀಡಬಹುದು ಎಂದು ಶಾಹಿದ್ ಆಸ್ಪತ್ರೆಗ ಹಾವು ತಂದಿದ್ದಾನೆ. ಡಬ್ಬದಲ್ಲಿ ಇರುವ ಜೀವಂತ ಹಾವು ನೋಡಿ ಆಸ್ಪತ್ರೆ ಸಿಬ್ಬಂದಿ, ರೋಗಿಗಳು ತಬ್ಬಿಬ್ಬಾಗಿದ್ದಾರೆ.
ಇನ್ನೂ ಚಿಕಿತ್ಸೆ ಪಡೆದ ಬಳಿಕ ಸ್ನೇಹಿತರ ಜೊತೆ ಬೈಕ್ನಲ್ಲಿ ಹಾವು ಸಮೇತ ವಾಪಾಸ್ ಹೋಗಿದ್ದಾನೆ.<>