Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪೊಲೀಸ್ ನಡೆಯಿಂದ ಜೀವ ಕಳೆದುಕೊಂಡ ಮಹಿಳೆ

ಪೊಲೀಸ್ ನಡೆಯಿಂದ ಜೀವ ಕಳೆದುಕೊಂಡ ಮಹಿಳೆ
bangalore , ಶುಕ್ರವಾರ, 25 ಫೆಬ್ರವರಿ 2022 (17:47 IST)
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ' ಎನ್ನುವಂತೆ ಪತಿ ಮಾಡಿದ ಸಾಲಕ್ಕೆ ಪತ್ನಿಯನ್ನು ಪೊಲೀಸರು (Police) ಠಾಣೆಗೆ ಕರತಂದಿದ್ದಾರೆ. ಈ ಅವಮಾನ ತಾಳತಾರದೆ ಪತ್ನಿ ಮನೆಗೆ ತೆರಳಿದ ಬಳಿಕ ನೇಣಿಗೆ (Suicide) ಶರಣಾಗಿದ್ದಾರೆ.
 
ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ (Bengaluru Rural) ನೆಲಮಂಗಲ ಟೌನ್ ಮಾರುತಿನಗರದಲ್ಲಿ ಘಟನೆ ನಡೆದಿದೆ. ಅಖಿಲಾ (35) ಮೃತ ದುರ್ದೈವಿ.
 
ಮಗಳನ್ನು ಕೊಂದ ತಂದೆ, ಕಾರಣ ಕೇಳಿದ್ರೆ ಕಣ್ಣಂಚಿನಲ್ಲಿ ನೀರು ತರಿಸುತ್ತೆ
 
ಫ್ರಾಡ್, ಫ್ರಾಡ್ ಅಂತಾ ಸದಾ ಅವಮಾನ ಮಾಡ್ತಾರೆ ಎಂದು ಡೆತ್​ ನೋಟ್ (Death Note) ಬರೆದು ಅಖಿಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಅಖಿಲಾ ಅವರಿಗೆ ಎರಡು ಮಕ್ಕಳು ಇವೆ.
 
ಅಖಿಲಾ ಅವರ ಪತಿ ಮಧುಕುಮಾರ್ ಸ್ಥಳೀಯ ನಿವಾಸಿ ಚಂದನ್ ಅಲಿಯಾಸ್ ಚನ್ನಕೇಶವ ಎಂಬಾತನ ಬಳಿ 1 ಲಕ್ಷ ಹಣ ಸಾಲ ಪಡೆದಿದ್ದರು. ಹಣ ವಾಪಸ್ಸು ನೀಡುವ ವಿಚಾರಕ್ಕೆ ಚಂದನ್ ಕಿರುಕುಳ ನೀಡಿತ್ತಿದ್ದ. ಪೊಲೀಸರ ಕಡೆಯಿಂದಲೂ ಕಿರುಕುಳ ಕೊಡಿಸುತ್ತಿದ್ದ ಎಂದು ಅರೋಪಿಸಿದ್ದರು.
 
ಪತಿ ಮನೆಯಲ್ಲಿ ಇರದ ಸಮಯದಲ್ಲಿ ಅಖಿಲಾರನ್ನ ಠಾಣೆಗೆ ಕರೆದುಕೊಂಡು ವಿಚಾರಣೆ ನೆಪದಲ್ಲಿ ಟಾರ್ಚರ್ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಠಾಣೆಯಿಂದ ನೇರವಾಗಿ ಮನೆಗೆ ಬಂದು ಅಖಿಲಾ ಸೂಸೈಡ್ ಮಾಡಿಕೊಂಡಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ವಿಜಯ್ ಕುಮಾರ್ ಮಾಡಿದ ಬಿಸಿನೆಸ್ಸು (Business) ಲಾಸ್ ಆಗಿತ್ತು. ಇತ್ತೀಚೆಗೆ ಕೆಲಸದಿಂದ ಸಹ ತೆಗೆಯಲಾಗಿತ್ತು.ಇದರಿಂದ ವಿಜಯ ಕುಮಾರ್ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ವೆಲ್ಡ್ಡಿಂಗ್ ಕೆಲಸ ಮಾಡಿಕೊಂಡು ಜೀವನ‌ ಸಾಗಿಸುತ್ತಿದ್ದರು. ಆದ್ರೆ, ಕಂಪನಿ ಲಾಸ್ ನಲ್ಲಿ ನಡೆಯುತ್ತಿದೆ ಎಂದು ವಿಜಯ್ ಕುಮಾರ್ ಸೇರಿದಂತೆ ಹತ್ತು ಮಂದಿಯನ್ನು ಕೆಲಸದಿಂದ ತೆಗೆಯಲಾಗಿತ್ತು.
 
ಹಾಗಾಗಿ ತಾನು ಮಾಡಿದ ಸಾಲ ತೀರಿಸೋಕೆ ಆಗಿರಲಿಲ್ಲ. ಗಂಡ, ಹೆಂಡತಿ ಕೆಲಸಕ್ಕೆ ಹೋದ್ರೂ, ಮಗಳ ಭವಿಷ್ಯ ಏನು ಎಂಬ ಚಿಂತೆ ತಂದೆಗೆ ಕಾಡಿತ್ತು, ಹೀಗಾಗಿ ಮಗಳನ್ನು ಕೊಂದು ತಾನೂ ನೇಣಿಗೆ ಕೊರಳೊಡ್ಡಿದ್ದಾನೆ.
 
ಮಗಳನ್ನ ಕೊಂದು ತಂದೆಯೂ ಆತ್ಮಹತ್ಯೆ
ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಬೇಸತ್ತ ತಂದೆಯೊಬ್ಬ ಮಗಳನ್ನು ಕೊಂದು ತಾನು ನೇಣು ಹಾಕಿಕೊಡು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಬೆಂಗಳೂರಿನ(Bengaluru) ಹೆಬ್ಬಗೋಡಿ ನಿವಾಸಿ 39 ವರ್ಷದ ವಿಜಯಕುಮಾರ್ ತನ್ನ 7 ವರ್ಷದ ಮಗಳು (Daughter) ಸಮೀಕ್ಷಾಳನ್ನು ಕೊಂದು ನೇಣಿಗೆ ಶರಣಾಗಿದ್ದಾರೆ.
 
ತಮಿಳುನಾಡು ಮೂಲದ ವಿಜಯ್ ಕುಮಾರ್ 20 ವರ್ಷದ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಫ್ಯಾಬ್ರಿಕೇಶನ್ ಫ್ಯಾಕ್ಟರಿ ನಡೆಸುತ್ತಿದ್ದ ವಿಜಯ್ ಕುಮಾರ್ ಗೆ ಕೋವಿಡ್ ಲಾಕ್ ಡೌನ್ ಸಮನಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಇದರಿಂದ ಖಿನ್ನತೆಗೊಳಗಾಗಿದ್ದ ವಿಜಯ್ ಕುಮಾರ್ 2ನೇ ತರಗತಿಯಲ್ಲಿ ಓದುತ್ತಿದ್ದ ಮಗಳನ್ನು ವೈರ್ ನಿಂದ ಕುತ್ತಿಗೆ ಬಿಗಿದು ಕೊಂದಿದ್ದಾರೆ. ನಂತರ ತಾನು ನೇಣಿಗೆ ಶರಣಾಗಿದ್ದಾರೆ. ಫ್ಯಾಕ್ಟರಿಗೆ ತೆರಳಿದ್ದ ಪತ್ನಿ ಚಂದ್ರಕಲಾ ಮನೆಗೆ ವಾಪಾಸಾದಾಗ ವಿಷಯ ಬೆಳಕಿಗೆ ಬಂದಿದೆ.
 
ತೋಟದ ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ
ಬಳ್ಳಾರಿ: ದಂಪತಿಗಳಿಬ್ಬರು ನೇಣು ಬಿಗಿದುಕೂಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿಯ ಚಳ್ಳಕುರ್ಕಿ ಬಳಿಯ ಜಮೀನಿನ ತೋಟದ ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 
ರಾಮಯ್ಯ, ಜಯಮ್ಮ ಮೃತ ದಂಪತಿ. ಘಟನಾ ಸ್ಥಳಕ್ಕೆ ಪಿಡಿ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪಿಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಟ್ಟಿಗೆಯಿಂದ ತಲೆ ಚಚ್ಚಿ ವ್ಯಕ್ತಿಯ ಬರ್ಬರ ಹತ್ಯೆ