ಅಕ್ಕಿ, ಬೇಳೆ ಕಾಳು ಬೆಲೆ ಏರಿಕೆ ಹಿನ್ನೆಲೆ ದತ್ತಾತ್ರೇಯ ವಾರ್ಡ್ ನಲ್ಲಿ ಸಚಿವ ದಿನೇಶ್ ಗುಂಡೂರಾವ್ ಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.ಕೃತಜ್ಞತೆ ಸಲ್ಲಿಸಲು ಪಾದಯಾತ್ರೆ ಮಾಡುವಾಗ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದು, ಅಕ್ಕಿ , ಬೇಳೆ, ದವಸ ಧಾನ್ಯ ಬೆಲೆ ಏರಿಕೆಯಾಗಿದೆ .ನಮ್ಮಂಥ ಬಡವರು ಬದುಕೋದು ಹೇಗೆ..?ಬೆಲೆ ಏರಿಕೆಯನ್ನ ಕಡಿಮೆ ಮಾಡಿ ಎಂದು ಸಚಿವರಿಗೆ ತರಾಟೆ ತೆಗೆದುಕೊಂಡಿದ್ದಾರೆ.ಅಲ್ಲದೇ ಕೇಂದ್ರ ಸರ್ಕಾರದವರು ಬೆಲೆ ಏರಿಕೆ ಮಾಡಿರೋದು.ಮೋದಿ ಅವರನ್ನ ಕೇಳಿ ಎಂದು ಹೇಳಿ ದಿನೇಶ್ ಗುಂಡೂರಾವ್ ಜಾಗ ಖಾಲಿ ಮಾಡಿದ್ದಾರೆ.