Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಸ್ಪತ್ರೆಯಲ್ಲಿಯೇ ಮಹಿಳೆಯ ಮೇಲೆ ಗ್ಯಾಂಗ್‌ರೇಪ್

ಆಸ್ಪತ್ರೆಯಲ್ಲಿಯೇ ಮಹಿಳೆಯ ಮೇಲೆ ಗ್ಯಾಂಗ್‌ರೇಪ್
ಮಧ್ಯಪ್ರದೇಶ , ಶನಿವಾರ, 18 ನವೆಂಬರ್ 2023 (17:00 IST)
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂಟು ವರ್ಷದ ಬಾಲಕಿಯ ತಾಯಿಯನ್ನು ಆಸ್ಪತ್ರೆಯಲ್ಲಿಯೇ ರೇಪ್‌ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಸ್ಪತ್ರೆಯ ಆಡಳಿತ ವ್ಯವಸ್ಥೆ ಮತ್ತು ಸೂಕ್ತ ಭದ್ರತೆಯೇ ಈ ರೇಪ್‌ಗೆ ಕಾರಣ ಎಂದು ಹೇಳಲಾಗುತ್ತಿದೆ.
 
ಮೊನ್ನೆ ಮಧ್ಯಪ್ರದೇಶದ ಭೂಪಾಲ್‌ ಪ್ರದೇಶದ ಹೊಶಂಗಬಾದ್‌ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ತನ್ನ ಎಂಟು ವರ್ಷದ ಮಗಳನ್ನು ದಾಖಲು ಮಾಡಿ, ಮಗಳನ್ನು ನೋಡಿಕೊಳ್ಳಲು ಅಕೆಯೂ ಕೂಡ ಅಲ್ಲಿಯೇ ಇದ್ದಳು. ಆ ಮಹಿಳೆಯನ್ನು ಗಮನಿಸಿದ ವಾರ್ಡ್‌‌ಬಾಯ್ ಮತ್ತು ಸೆಕ್ಯೂರಿಟಿ ಗಾರ್ಡ್‌ ಆಕೆಯನ್ನು ಕಾಮ ತೃಷೆಗೆ ಬಳಸಿಕೊಳ್ಳಲು ಸಂಚು ಹಾಕಿದ್ರು.
 
ನಂತರ ಮಗುವಿನ ಬೆಡ್‌ ಬಳಿ ಕುಳಿತಿದ್ದ ಆಕೆಯನ್ನು ಸೆಕ್ಯೂರಿಟಿ ಗಾರ್ಡ್‌ ಮತ್ತು ವಾರ್ಡ್ ಬಾಯ್ ಇಬ್ಬರು ಸೇರಿ ಟಾಯ್ಲೆಟ್‌ ರೂಮಿಗೆ ಹೊತ್ತುಕೊಂಡು ಹೋಗಿದ್ದಾರೆ. ನಂತರ ಬಾತ್‌ ರೂಮಿನ ಬಾಗಿಲು ಚಿಲಕ ಹಾಕಿ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ಕೆಲ ಪ್ರದೇಶದಲ್ಲಿಂದು ವಿದ್ಯುತ್ ವ್ಯತ್ಯಯ