ಹೆಂಡತಿ ಮಗುವನ್ನು ಹಾರೆಯಲ್ಲಿ ತಿವಿದು ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮಾವಿನಹಳ್ಳಿಯಲ್ಲಿ ನಡೆದಿದೆ. 24 ವರ್ಷದ ಕಾವ್ಯ ಹಾಗೂ 4 ವರ್ಷದ ಜೀವನ್ ತಾಯಿ ಮಗ ಕೊಲೆಯಾಗಿದ್ದಾರೆ. 30 ವರ್ಷದ ಸ್ವಾಮಿ ಕೊಲೆ ಮಾಡಿದ ಪಾಪಿಯನ್ನು ಬಂಧಿಸಲಾಗಿದೆ. ಬೆಳಗಿನ ಜಾವ ಸುಮಾರು 6 ಗಂಟೆಗೆ ತನ್ನ ಮನೆಯಲ್ಲಿ ಹೆಂಡತಿ ಮಗುವನ್ನು ಕೊಂದಿದ್ದಾನೆ ಎಂದು ಸ್ಥಳೀಯರಿಂದ ತಿಳಿಯಲಾಗಿದೆ. ಘಟನೆ ನೋಡಿದ ಸ್ಥಳೀಯರು ಸ್ವಾಮಿಯನ್ನು ಕೈಕಟ್ಟಿ ಹಾಕಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಚೇಳೂರು ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಕರಣ ದಾಖಲಾಗಿದೆ.