ಅನರ್ಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿಯನ್ನು ಜೆಡಿಎಸ್ ಕಾರ್ಯಕರ್ತನೊಬ್ಬ ತಡೆದು ನಿಲ್ಲಿಸಿ, ನೀರಿಳಿಸಿದ ಘಟನೆ ನಡೆದಿದೆ.
ಮಂಡ್ಯದ ಕಿಕ್ಕೇರಿಯಲ್ಲಿ ಘಟನೆ ನಡೆದಿದ್ದು, ಮುಖ್ಯಮಂತ್ರಿ ಚುನಾವಣಾ ಪ್ರಚಾರಕ್ಕೆ ಆಗಮದ ಹಿನ್ನೆಲೆಯಲ್ಲಿ ಕಿಕ್ಕೇರಿ ಪಟ್ಟಣಕ್ಕೆ ಆಗಮಿಸಿದ್ದರು ಬಿಜೆಪಿ ಅಭ್ಯರ್ಥಿ ಕೆ. ಸಿ. ನಾರಾಯಣಗೌಡ.
ಪ್ರಚಾರದ ವೇಳೆಯಲ್ಲಿ ಕೆ. ಸಿ. ನಾರಾಯಣಗೌಡರು ತಮ್ಮ ಕಾರಿನಲ್ಲಿ ಕುಳಿತು ಎಲ್ಲರಿಗೂ ಕೈ ಮುಗಿದುಕೊಂಡು ಮತ ಯಾಚನೆ ಮಾಡುತ್ತಿದ್ದರು. ಆಗ ಜೆಡಿಎಸ್ ಕಾರ್ಯಕರ್ತನನ್ನು ಮಾತನಾಡಿಸಲು ಮುಂದಾಗಿದ್ದಾರೆ.
ಜೆ ಡಿ ಎಸ್ ಕಾರ್ಯಕರ್ತ ಬಿಜೆಪಿ ಅಭ್ಯರ್ಥಿಯನ್ನು ನೋಡಿ, ನೀನು ಯಾರು? ನನ್ನನ್ನು ಯಾಕೆ ಮಾತನಾಡಿಸುತ್ತಿದ್ದೀಯಾ? ಎಂದು ಕೇಳಿದ್ದಾನೆ.
ಮಾತಿನ ಚಕಮಕಿಯಲ್ಲಿ ಕೆ ಸಿ ನಾರಾಯಣಗೌಡ, ಪೊಲೀಸರನ್ನು ಕರೆಸಿ ಈತನಿಗೆ ಬುದ್ಧಿ ಕಲಿಸುತ್ತೇನೆ ಎಂದು ಧಮ್ಕಿ ಹಾಕಿದ್ರು.
ನನಗೆ ಈತ ಒಂದು ಲಕ್ಷ ಹಣ ಕೊಡಬೇಕು ಎಂದು ಆರೋಪ ಮಾಡಿದ್ರು. ಆಗ ಸ್ಥಳೀಯರು ನಾರಾಯಣಗೌಡಗೆ ಸಮಾಧಾನ ಪಡಿಸಿದ್ರು.