ತನ್ನ ಪತ್ನಿಯನ್ನು ಪದೇ ಪದೇ ನೋಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪತಿಯೊಬ್ಬ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಯಾದಗಿರಿಯ ಸುರಪುರದ ದೇವಿಕೇರಿಯಲ್ಲಿ ಘಟನೆ ನಡೆದಿದೆ. ಯಂಕಪ್ಪ ಕೊಡವಿಭೋವಿ ಕೊಲೆಯಾದ ವ್ಯಕ್ತಿಯಾಗಿದ್ದಾನೆ.
ಶಿವಪ್ಪ ಕೊಡವಿಭೋವಿ ಕೊಲೆ ಮಾಡಿದ ಆರೋಪಿಯಾಗಿದ್ದು, ಶಿವಪ್ಪನ ಮನೆ ಮುಂದೆ ಹಾದು ಹೋಗುವಾಗ ಯಂಕಪ್ಪ ಪದೇ ಪದೇ ಶಿವಪ್ಪನ ಪತ್ನಿಯನ್ನು ನೋಡುತ್ತಿದ್ದನಂತೆ.
ಈ ಕುರಿತು ಯಂಕಪ್ಪನಿಗೆ ವಾರ್ನಿಂಗ್ ನೀಡಿದ್ದರೂ ಯಂಕಪ್ಪ ಮಾತ್ರ ಶಿವಪ್ಪನ ಹೆಂಡತಿಯನ್ನು ನೋಡುವುದನ್ನು ಬಿಟ್ಟಿರಲಿಲ್ಲ.
ರಾತ್ರಿ ಮನೆ ಮಂದಿ ಮನೆ ಮೇಲೆ ಮಲಗಿದ್ದಾಗ ಯಂಕಪ್ಪನನ್ನು ಶಿವಪ್ಪ ಕೊಲೆ ಮಾಡಿದ್ದಾನೆ.