ಮೈಸೂರು : ಚುನಾವಣೆ ಹಿನ್ನೆಲೆಯಲ್ಲಿ ನಡೆಸಿದ ಜೆಡಿಎಸ್ ಪಂಚರತ್ನ ಯಾತ್ರೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ದೂರಿ ತೆರೆ ಬಿದ್ದಿದೆ. ಉತ್ತನಹಳ್ಳಿ ಗ್ರಾಮದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದರು. ಸಮಾರೋಪದಲ್ಲಿ ಆಕರ್ಷಣಾ ಕೇಂದ್ರಬಿಂದುವಾಗಿದ್ದು ಮಾಜಿ ಪ್ರಧಾನಿ ದೇವೇಗೌಡರು.
ಅನಾರೋಗ್ಯದ ಕಾರಣ ಟ್ರಾಲಿಯಲ್ಲಿ ಕೂತೇ ಕಾರ್ಯಕರ್ತರಿಗೆ ಚೈತನ್ಯ ತುಂಬಿದರು. ಈ ವೇಳೆ ದೇವೇಗೌಡರಿಗೆ ಮಕ್ಕಳು-ಮೊಮ್ಮಕ್ಕಳು ಸಾಥ್ ನೀಡಿದರು. ದೇವೇಗೌಡರಿಗೆ ಇಮ್ಮಡಿ ಪುಲಕೇಶಿ ಮಾದರಿ ಕಿರೀಟ, ಚಿನ್ನದ ಲೇಪನದ ನೇಗಿಲು-ನೊಗ ಕೊಡಲಾಯಿತು.
ದೇವೇಗೌಡರು ಮಾತಾಡಿ, ನಿಮ್ಮೆಲ್ಲರ ಹಾರೈಕೆಯಿಂದ ನಿಮ್ಮ ಮುಂದೆ ಬಂದಿದ್ದೇನೆ. ಜಾತಿ-ಧರ್ಮ ಆಧಾರದ ಮೇಲೆ ಮತ ಕೇಳಬೇಡಿ. ಕೇವಲ ಅಭಿವೃದ್ಧಿ ವಿಷಯದಲ್ಲಿ ಮತ ಕೇಳಲು ಸೂಚನೆ ನೀಡಿದ್ದೇನೆ. ನಮ್ಮನ್ನು ನಂಬಿ ನಮ್ಮ ಪಕ್ಷಕ್ಕೆ ಮತ ನೀಡಿ ಗೆಲುವು ನೀಡಿಯೆಂದು ಮನವಿ ಮಾಡ್ತೇನೆ ಅಂದರು.